ಬೆಂಗಳೂರು: ಮೊಬೈಲ್ ಕಳವು ಪ್ರಕರಣಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಬೆಂಗಳೂರು ಪಶ್ಚಿಮ ವಲಯದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ಕೇಂದ್ರ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳ ಅವಧಿಯಲ್ಲಿ 105 ಖದೀಮರನ್ನು ಬಂಧಿಸಿರುವ ಪೊಲೀಸ್ರು, 928 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇಂದ್ರ ವಿಭಾಗದಲ್ಲಿ 121, ಪಶ್ಚಿಮ ವಿಭಾಗದಲ್ಲಿ 334, ದಕ್ಷಿಣ ವಿಭಾಗದಲ್ಲಿ 342, ಉತ್ತರ ವಿಭಾಗದಲ್ಲಿ 131 ಮೊಬೈಲ್ ಗಳನ್ನು ಸೀಜ್ ಮಾಡಲಾಗಿದೆ. ವಶ ಪಡಿಸಿಕೊಂಡ ಮೊಬೈಲ್ಗಳ ಮಾಹಿತಿಯನ್ನು ಪೊಲೀಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಿದ್ದು, ಐಎಂಇಐ ನಂಬರ್ ಪರಿಶೀಲಿಸಿ ಮಾಲೀಕರು ತಮ್ಮ ಮೊಬೈಲ್ಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.
PublicNext
16/09/2022 08:53 pm