ಬೆಂಗಳೂರು: ಕರ್ನಾಟಕದ ಶಿವಮೊಗ್ಗದಲ್ಲಿ ಉಗ್ರರ ಬಂಧನ ಆದ ನಂತರ ಮತ್ತೆ ಉಗ್ರ ಸಂಪರ್ಕ ಕೊಂಡಿಗಳ ಮೇಲೂ ಎನ್ಐಎ ಅಧಿಕಾರಿಗಳು ದಾಳಿಯನ್ನು ತೀವ್ರಗೊಳಿಸಿದೆ. ಇಂದು ಬೆಳಗ್ಗೆ ಮಂಗಳೂರು ಬೆಂಗಳೂರು ಸೇರಿದಂತೆ 50ಕ್ಕು ಹೆಚ್ಚು ಕಡೆ ಎನ್ಐಎ ದಾಳಿ ಮುಂದುವರೆಸಿದೆ.
ಉಗ್ರರ ಜೊತೆಗೆ ನಂಟಿನ ಹಿನ್ನಲೆಯಲ್ಲಿ ಪಿಎಫ್ಐ ನ್ಯಾಷನಲ್ ಜನರಲ್ ಸೆಕ್ರೆಟರಿ ಅನೀನ್ ಅಹ್ಮದ್ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿ ಕಣ್ಣೂರು ಬಳಿಯ ರಾಗ ಅಪಾರ್ಟ್‌ಟ್‌ನ ಪ್ಲಾಟ್‌ನಲ್ಲಿ ಅನೀಸ್ ಅಹ್ಮದ್ ವಾಸವಿದ್ದ. ಉಗ್ರರ ಸಂಪರ್ಕ ಹಿನ್ನಲೆಯಲ್ಲಿ ಅನೀಸ್ ಅಹ್ಮದ್ ರಾಗ ಅಪಾರ್ಟ್ಮೆಂಟ್ ಮನೆ ಮೇಲೂ ಎನ್ಐಎ ದಾಳಿ ಮುಂದುವರೆಸಿದೆ. ಉಗ್ರರ ಒಡನಾಟಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ದಾಖಲೆ, ಮೊಬೈಲ್, ಲ್ಯಾಪ್ಟಾಪ್, ಮೇಲ್ಸ್, ಮೆಸೇಜಸ್ ಬಗ್ಗೆ ಎನ್ಐಎ ತೀವ್ರ ತಪಾಸಣೆ ಮುಂದುವರೆಸಿದೆ.
PublicNext
22/09/2022 10:34 am