ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಎಂಟಿಸಿ ಡ್ರೈವರ್ ಮೇಲೆ ಮತ್ತೊಂದು ಹಲ್ಲೆ

ಬೆಂಗಳೂರು : ಬೈಕ್ ಗೆ ಜಾಗ ಕೊಡಲಿಲ್ಲ ಎನ್ನುವ ಕಾರಣಕ್ಕೆ ಬಿಎಂಟಿಸಿ ಡ್ರೈವರ್ ಮೇಲೆ ಹಲ್ಲೆ ನಡೆದಿರೋ ಆರೋಪ ಕೇಳಿ ಬಂದಿದೆ. ಮೂರು ತಿಂಗಳಲ್ಲಿ ನಡೆದ ಒಂಬತ್ತನೇ ಹಲ್ಲೆ ಪ್ರಕರಣ ಇದಾಗಿದ್ದು, ನವೆಂಬರ್ ತಿಂಗಳಲ್ಲೇ ಬಿಎಂಟಿಸಿಯ ಡ್ರೈವರ್- ಕಂಡಕ್ಟರ್ ಮೇಲೆ ನಾಲ್ಕನೇ ಬಾರಿ ಹಲ್ಲೆಯಾಗಿದೆ ಎಂದು ಹೇಳಲಾಗ್ತಿದೆ.

ಕುಶಾಲ್ ಕುಮಾರ್ ( 38 ) ಹಲ್ಲೆಗೊಳಗಾದ ಬಿಎಂಟಿಸಿ ಡ್ರೈವರ್ ಆಗಿದ್ದು, ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಈ ಘಟನೆ ನಡೆದಿದೆ. ಮೆಜೆಸ್ಟಿಕ್ ನಿಂದ ಸಿ.ಕೆ ಪಾಳ್ಯ ಹೋಗುತ್ತಿದ್ದ ಬಸ್ ಮತ್ತು ಬೈಕ್ ಚಾಲಕನ ನಡುವೆ ಈ ಕಿರಿಕ್ ನಡೆದಿದೆ‌. ತನ್ನ ಸ್ಕೂಟರ್ ಗೆ ಜಾಗ ಬಿಡಲಿಲ್ಲ ಎನ್ನುವ ಕಾರಣಕ್ಕೆ ಮುಂಬದಿ ಡೋರ್ ನಿಂದ ಬಸ್ ಹತ್ತಿ ಕುಶಾಲ್ ಕೊರಳಪಟ್ಟಿಗೆ ಕೈ ಹಾಕಿ ಎಳೆದಾಡಿ ಹಲ್ಲೆ ಮಾಡಿರೋ ಆರೋಪ‌ ಮಾಡಲಾಗಿದೆ.

ಘಟನೆ ಕೆಲ ದೃಶ್ಯ ಬಸ್ ಸಿಸಿಟಿವಿಯಲ್ಲೂ ಸೆರೆಯಾಗಿದೆ. ಇದನ್ನು ಪ್ರಶ್ನೆ ಮಾಡಿದ ಕಂಡಕ್ಟರ್ ಕೃಷ್ಣ ಮೇಲೂ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್‌ ಠಾಣೆಯಲ್ಲಿ ಫಯಾಜ್ ಎಂಬಾತನ ಮೇಲೆ ಎಫ್ಐಆರ್ ದಾಖಲಾಗಿದೆ.

Edited By : Manjunath H D
PublicNext

PublicNext

21/11/2024 11:45 am

Cinque Terre

7.56 K

Cinque Terre

0

ಸಂಬಂಧಿತ ಸುದ್ದಿ