ಮಲ್ಲೇಶ್ವರಂ: ಬೆಳ್ಳಂ ಬೆಳಿಗ್ಗೆ ನಗರದ ಶೇಷಾದ್ರಿಪುರ ಬಳಿ ರೌಡಿ ಶೀಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಣೇಶ @ ಕುಂದಾಪ್ರಿ ಗಣೇಶ್ ಮೇಲೆ ಮಾರಾಣಾಂತಿಕ ಹಲ್ಲೆಯಾಗಿದೆ. ಹಲ್ಲೆಗೊಳಗಾಗಿರೋ ಗಣೇಶ್ ಆಸ್ಪತ್ರೆ ಸಾವುಬದುಕಿನ ಮದ್ಯೆ ಹೋರಾಟ ನಡೆಸ್ತಿದ್ದಾನೆ. ಬೈಕ್‌ನಲ್ಲಿ ಬಂದ ಎರಡು ಗುಂಪು ನಗರದ ನಟರಾಜ ಚಿತ್ರಮಂದಿರದ ಬಳಿ ಗಣೇಶ್ ಮೇಲೆ ಲಾಂಗು ಮಚ್ಚಿನಿಂದ ಮನೊಸೋ ಇಚ್ಚೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಕುಟುಂಬ ದ್ವೇಷ ಅಥವಾ ಹಳೇ ದ್ವೇಷದಿಂದ ನಡೀತಾ ಕೊಲೆ ಯತ್ನ ಅನ್ನೋದನ್ನ ಪೊಲೀಸರು ತನಿಖೆ ನಡೆಸ್ತಿದ್ದಾರೆ. 2020 ರಲ್ಲಿ ಕಿನೋ ಥಿಯೇಟರ್ ಬಳಿ ಇದೇ ಗಣೇಶನ ಟೀಂ ಯುವಕನೊಬ್ಬನನ್ನ ಕೊಚ್ಚಿ ಕೊಲೆ ಮಾಡಿತ್ತು .ಕ್ಷುಲ್ಲಕ ವಿಚಾರಕ್ಕೆ ಯುವಕನನ್ನ ಕೊಚ್ಚಿದ್ದ ಗಣೇಶನ ಅಂಡ ಟೀಂ ಸಾಕಷ್ಟು ವೈರತ್ವ ಇತ್ತು. ಅದೇ ದ್ವೇಷದ ಹಿನ್ನೆಲೆ ಗಣೇಶನಿಗೆ ದುಶ್ಮನ್ ಗಳಯ ಮೂಹುರ್ತ ಇಟ್ಟಿರುವ ಅನುಮಾನ ಕೂಡ ವ್ಯಕ್ತವಾಗಿದೆ.
ಇದ್ರ ಜೊತೆಗೆ ಕುಟುಂಬದಲ್ಲಿ ದಾಯಾದಿಗಳ ಕಲಹ ಕೂಡ ಇದ್ದು, ಈ ಆಯಾಮದಲ್ಲೂ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ. ಗಣೇಶ ಫ್ರೀಡಂ ಪಾರ್ಕ್ ಬಳಿ ಸ್ಕ್ರ್ಯಾಪ್ ಅಂಗಡಿ ಇಟ್ಟುಕೊಂಡಿದ್ದ. ಶೇಷಾದ್ರಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು
PublicNext
13/09/2022 11:53 am