ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Video: ಬೆಸ್ಕಾಂ ಬಿಲ್ ಪಾವತಿ ಹೆಸರಲ್ಲಿ ಸೈಬರ್ ವಂಚಕರ ಮಹಾಮೋಸ: ಹುಷಾರಾಗಿರಿ

ಬೆಂಗಳೂರು: ಬೆಸ್ಕಾಂ ಹೆಸರಲ್ಲಿ ಸೈಬರ್ ವಂಚಕರು ಆನ್‌ಲೈನ್‌ನಲ್ಲಿ ಮೋಸ ಮಾಡುತ್ತಿರುವ ಬಗ್ಗೆ ಪ್ರಕರಣಗಳು ಬೆಳಕಿಗೆ ಬಂದಿವೆ. ಗ್ರಾಹಕರು ತಮ್ಮ ಮೊಬೈಲ್ ಫೋನ್‌ಗೆ ಬರುವ ಯಾವುದೇ ಮೆಸೇಜ್‌ಗಳಿಗೆ ಸ್ಪಂದಿಸಬಾರದು. ಅನುಮಾನ ಇದ್ದಲ್ಲಿ ಹೆಸ್ಕಾಂ ಸಿಬ್ಬಂದಿಯನ್ನು ಸಂಪರ್ಕಿಸಬೇಕು ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಹೇಳಿದ್ದಾರೆ.

ಈ ಬಗ್ಗೆ ವಿಡಿಯೋ ಮೂಲಕ ಅವರು ಗ್ರಾಹಕರನ್ನು ಎಚ್ಚರಿಸಿದ್ದಾರೆ‌. ಸೈಬರ್ ವಂಚಕರು ಮೊದಲು ಮೆಸೇಜ್ ಕಳುಹಿಸುತ್ತಾರೆ‌‌. ಬಿಲ್ ಬಾಕಿ ಇರುವ ಬಗ್ಗೆ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಬಂದ ಸಂದೇಶ ನೋಡಿ ಆತಂಕಗೊಳ್ಳುವ ಗ್ರಾಹಕರು ಅಲ್ಲಿರುವ ಸಂಪರ್ಕ ಸಂಖ್ಯೆಗೆ ಕರೆ ಮಾಡಿದರೆ ಅವರು ಒಟಿಪಿ(One time password) ಹೇಳಲು ಹೇಳುತ್ತಾರೆ. ಅಕಸ್ಮಾತ್ ಒಟಿಪಿ ಹೇಳಿದರೆ‌ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಒಟ್ಟು ಹಣ ಸೈಬರ್ ವಂಚಕರ ಖಾತೆಗೆ ವರ್ಗಾವಣೆ ಆಗಲಿದೆ.

ಹೀಗಾಗಿ ಅಧಿಕೃತ ಅಲ್ಲದ ಯಾವುದೇ ಸಂಪರ್ಕ ಸಂಖ್ಯೆಗಳಿಂದ ಕರೆ ಅಥವಾ ಸಂದೇಶ ಬಂದರೆ ಅದಕ್ಕೆ ಪ್ರತಿಕ್ರಿಯಿಸಬೇಡಿ ಎಂದು ಬೆಸ್ಕಾಂ ಎಂ.ಡಿ ಮಹಾಂತೇಶ್ ಬೀಳಗಿ ಗ್ರಾಹಕರನ್ನು ಎಚ್ಚರಿಸಿದ್ದಾರೆ.

Edited By : Nagaraj Tulugeri
PublicNext

PublicNext

20/09/2022 09:27 am

Cinque Terre

29.61 K

Cinque Terre

2

ಸಂಬಂಧಿತ ಸುದ್ದಿ