ಬೆಂಗಳೂರು: ಬೆಂಗಳೂರು ಯುನಿವರ್ವಸಿಟಿ ಕ್ಯಾಂಪಸ್‌ನಲ್ಲಿ ಆಕ್ಸಿಡೆಂಟ್ ಮೇಲೆ ಆಕ್ಸಿಡೆಂಟ್ ಆಗ್ತಿವೆ. ಇಂದು ಒಂದೇ ದಿನ ಒಂದೇ ಜಾಗದಲ್ಲಿ ಮೂರು ಅಪಘಾತಗಳು ಸಂಭವಿಸಿವೆ. ಆತುರಕ್ಕೆ ಅವೈಜ್ಞಾನಿಕ ಹಂಪ್ ಹಾಕಿರೋ ಪರಿಣಾಮ ಹಂಪ್ ಬಳಿಯೇ ಬಂದು ವಾಹನ ಸವಾರರು ಬೀಳ್ತಿದ್ದಾರೆ.
ಅವಸರದಲ್ಲಿ ಹಂಪ್ ನಿರ್ಮಾಣ ಮಾಡಿರುವ ಬಿಬಿಎಂಪಿ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದೆಯಾ? ಎಂಬ ಪ್ರಶ್ನೆ ಮೂಡ್ತಿದೆ. ಸೈಕಾಲಜಿ ಡಿಪಾರ್ಟ್ಮೆಂಟ್ ಮುಂದೆ ನಿರ್ಮಾಣವಾಗ್ತಿರೋ ಹಂಪ್‌ನ ಕಾರಣದಿಂದ ನಿನ್ನೆ ರಾತ್ರಿಯಿಂದ ಬೈಕ್ ಸವಾರಾರು ಬಿದ್ದು ಗಾಯ ಮಾಡಿಕೊಳ್ತಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ನಿನ್ನೆ ವಿದ್ಯಾರ್ಥಿನಿ ಅಫಘಾತದ ಬಳಿಕ ರಸ್ತೆ ಹಂಪ್ ಹಾಕಲಾಗಿದ್ದು, ದಿಢೀರ್ ಹಾಕಿದ ಹಂಪ್‌ನಿಂದ ಒಂದರ ಹಿಂದೆ ಮತ್ತೊಂದು ಅಫಘಾತ ಆಗ್ತಿದೆ. ನಿನ್ನೆ ರಾತ್ರಿ ಹಂಪ್ ನಿಂದ ನಿಯಂತ್ರಣ ತಪ್ಪಿ ಬಿದ್ದು ಯುವಕ ಗಾಯಗೊಂಡಿದ್ದ. ಇದೀಗ ಮತ್ತೊರ್ವ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದು ಮಹಮ್ಮದ್ ಪಾಜೀಲ್ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
11/10/2022 10:56 pm