ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಾರೀ ಮಳೆಗೆ ಕುಸಿದುಬಿದ್ದ ರೂಂ ಮೇಲ್ಛಾವಣಿ: ಇಬ್ಬರು ಕಾರ್ಮಿಕರು ಸಾವು, ಮೂವರಿಗೆ ಗಾಯ

ವರದಿ- ಬಲರಾಮ್ ವಿ

ಬೆಂಗಳೂರು: ರೂಮ್ ವೊಂದರ ಮೇಲ್ಛಾವಣಿ ಕುಸಿದು ರೂಮ್ ನಲ್ಲಿ ಮಲಗಿದ್ದ ಐವರು ಕಾರ್ಮಿಕರಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ವೈಟ್ ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಫೈಟ್ ಇಂಡಿಯಾ ಬಳಿ ನಡೆದಿದೆ.

ಹೌದು ನಿನ್ನೆ ರಾತ್ರಿ ಬೆಂಗಳೂರಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ರೂಮ್ ನ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಬಿಹಾರ ಮೂಲದ ಐವರು ಕಾರ್ಮಿಕರಲ್ಲಿ ಜೈನುದ್ದೀನ್ ಹಾಗೂ ಅರ್ಮಾನ್ ಎಂಬ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.. ಅಷ್ಟೇ ಅಲ್ಲದೇ ಕುಂದನ್, ಮಾಸುನ್, ಹಾಗೂ ಬಷೀರ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ವೈಟ್ ಫೀಲ್ಡ್ ನ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ಸಂಭವಿಸಿದ್ದು, ತದನಂತರ ಮಹದೇವಪುರ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ಮೃತದೇಹಗಳನ್ನು ಹೊರ ತೆಗೆದಿದ್ದಾರೆ..

Edited By : Nagesh Gaonkar
PublicNext

PublicNext

11/10/2022 05:13 pm

Cinque Terre

25.07 K

Cinque Terre

0