ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನುಮತಿ ಇಲ್ಲದೆ ನಕಲಿ ಸ್ಕೂಲ್ ನಡೆಸುತ್ತಿದ್ದ ಆರ್ಕಿಡ್ ಶಾಲೆ ಮೇಲೆ ಎಫ್ ಐಆರ್!

ಬೆಂಗಳೂರು: ಮಾಗಡಿ ರಸ್ತೆ ಹೊಸಹಳ್ಳಿ ಗೊಲ್ಲರಪಾಳ್ಯದಲ್ಲಿ ಅನುಮತಿ ಇಲ್ಲದೆ ನಡೆಸುತ್ತಿದ್ದ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಬ್ಯಾಡರಹಳ್ಳಿ ಠಾಣೆಯಲ್ಲಿ ಶಾಲೆ ಮೇಲೆ ಎಫ್‌ಐ.ಆರ್ ದಾಖಲಿಸಿ ಶಾಲೆಯನ್ನ ತಾತ್ಕಾಲಿಕವಾಗಿ ಬಿಇಓ ರಮೇಶ್ ಕ್ಲೋಸ್ ಮಾಡಿದ್ದಾರೆ. ಬೆಂಗಳೂರು ಉತ್ತರ ವಲಯ 1 ರಲ್ಲಿ ಬರುವ ಆರ್ಕಿಡ್ ದಿ ಇಂಟರ್ ನ್ಯಾಷನಲ್ ಸ್ಕೂಲ್ 1 ರಿಂದ 7 ನೇ ತರಗತಿವರೆಗೆ ಶಾಲೆ ನಡೆಸಲಾಗುತ್ತಿದೆ.

ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಶಾಲೆ ಪ್ರಾರಂಭ ಮಾಡಿರೋ ಆರೋಪ‌ ಕೇಳಿ ಬಂದಿದ್ದು ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆಯ ಸೆಕ್ರೆಟರಿ ಹಾಗೂ ಶಾಲಾ ಪ್ರಾಂಶುಪಾಲರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಲೆಯಲ್ಲಿ ಎಲೆಕ್ಟ್ರಿಕ್ ಕೆಲಸ ನಡೀತಾ ಇದೆ ಅಂತ ಸಬೂಬು ಹೇಳಿ ಶಾಲೆಯಿಂದ ಪೋಷಕರಿಗೆ ತಪ್ಪು ಮಾಹಿತಿ ನೀಡಿ ಶಾಲೆ ಕ್ಲೋಸ್ ಮಾಡಿದ್ದಾರೆ.ಆನ್ ಲೈನ್ ಕ್ಲಾಸ್ ಮಾಡುವುದಾಗಿ ಮೆಸೇಜ್ ಕಳುಹಿಸಿರುವ ಶಾಲಾ ಆಡಳಿತ ಮಂಡಳಿ ಮಾತನ್ನ ಪೋಷಕರು ನಂಬಿದ್ದಾರೆ.ಇನ್ನೂ ಶಾಲೆ ಬಳಿ ಬಂದಾಗಲೇ ಪೋಷಕರಿಗೆ ಅಸಲಿ ಸತ್ಯ ಗೋತ್ತಾಗಿದ್ದು,ಲಕ್ಷ ಲಕ್ಷ ಹಣ ಪಡೆದು ಪೋಷಕರಿಗೆ ವಂಚನೆ ಮಾಡಿದ ಶಾಲಾ ಆಡಳಿತ ಮಂಡಳಿ ಅನ್ನೋ ಅನುಮಾನ‌ಮೂಡಿದೆ.

Edited By : Shivu K
Kshetra Samachara

Kshetra Samachara

14/07/2022 11:04 am

Cinque Terre

2.04 K

Cinque Terre

0