ದೇವನಹಳ್ಳಿ : ಫೆ.14. ಪ್ರೇಮಿಗಳ ದಿನ ಈ ದಿನವನ್ನು ಇನ್ನಷ್ಟು ಸುಂದರವಾಗಿಸೊದೆ ಗುಲಾಬಿಗಳು. ಪ್ರೀತಿಯ ಪಾತ್ರರಿಗೆ ಕೈಯಲ್ಲೊಂದು ಹೂ ಹಿಡಿದು ಹೋಗುವುದು ಪ್ರತೀತಿ ಎಂದರು ತಪ್ಪಾಗಲಾರದು.
ಸದ್ಯ ಭಾರತದಲ್ಲಿ ಅತಿಹೆಚ್ಚು ಗುಲಾಬಿ ರಫ್ತು ಮಾಡುವ ಹೆಗ್ಗಳಿಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಬಾರಿಯ ಪ್ರೇಮಿಗಳ ದಿನದ ಆಚರಣೆಗಾಗಿ ಕೆಐಎಎಲ್ ಪ್ರಪಂಚದ 25 ಸ್ಥಳಗಳಿಗೆ 18 ಏರ್ ಲೈನ್ಸ್ ನಿಂದ 5.15 ಲಕ್ಷ ಕೆಜಿ ಗುಲಾಬಿ ಹೂವು ರಫ್ತು ಮಾಡಲಾಗಿದೆ.
ಬೆಂಗಳೂರು ಸುತ್ತಮುತ್ತ ಪ್ರದೇಶದಲ್ಲಿ ಅತಿ ಹೆಚ್ಚು ಗುಲಾಬಿ ಬೆಳೆಯಲಾಗುತ್ತದೆ. ಅಂತರರಾಷ್ಟ್ರೀಯ ಗುಣಮಟ್ಟದ ಗುಲಾಬಿಯನ್ನ ಸ್ಥಳೀಯ ರೈತರು ಬೆಳೆಯುತ್ತಿದ್ದಾರೆ, ರೈತರಿಗೆ ಮಾರುಕಟ್ಟೆ ವಿಸ್ತಾರವನ್ನು ಮಾಡಿರುವ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವರ್ಷದಿಂದ ವರ್ಷಕ್ಕೆ ಗುಲಾಬಿ ಹೂವು ರಫ್ತು ಪ್ರಮಾಣವನ್ನು ಹೆಚ್ಚು ಮಾಡುತ್ತಲೆ ಬಂದಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಾದ ಸಿಂಗಾಪುರ, ಕೌಲಾಲಂಪುರ್, ಲಂಡನ್, ಆಂಸ್ಟರ್ಡ್ಯಾಮ್, ಕುವೈತ್, ಆಕ್ಲೆಂಡ್, ಬೈರುತ್, ಮನಿಲಾ, ಮಸ್ಕತ್ ಮತ್ತು ದುಬೈಗೆ ಗುಲಾಬಿ ರಫ್ತಾಗುತ್ತಿದೆ. ಈ ವರ್ಷ ವಿದೇಶಿ ಮಾರುಕಟ್ಟೆ 2 ಲಕ್ಷ ಕೆಜಿಯ 7.3 ಮಿಲಿಯನ್ ಗುಲಾಬಿ ಹೂವು ಕೆಐಎಎಲ್ ನಿಂದ ರಫ್ತು ಮಾಡಲಾಗಿದೆ.
ಈ ವರ್ಷ 3.15 ಲಕ್ಷ ಕೆಜಿಯ 6.5 ಮಿಲಿಯನ್ ಗುಲಾಬಿ ಹೂವು ದೇಶಿ ಮಾರುಕಟ್ಟೆಗೆ ರಫ್ತು ಮಾಡಲಾಗಿದೆ.
PublicNext
15/02/2022 04:19 pm