ಯಲಹಂಕ: ರೈತರು, ರಾಗಿ, ಜೋಳ, ಭತ್ತ, ಕಡಲೆ, ತೊಗರಿ ಬೆಳೆದು ದೇಶದ ಜನತೆಗೆ ನೀಡ್ತಾರೆ. ಕೊರೊನಾ ಸಂಕಷ್ಟ ಬಂದೊದಗಿ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ದೊರೆಯುತ್ತಿಲ್ಲ. ಇದೀಗ ರೈತರಲ್ಲೆ ಒಡಕು ಮೂಡುವಂತೆ ದೊಡ್ಡ ರೈತರು, ಸಣ್ಣ ರೈತರು ಎಂಬ ಭೇದಭಾವ ತಂದು ಸರ್ಕಾರ ರೈತರನ್ನೇ ಒಡೆಯುವ ಕೆಲಸ ಮಾಡ್ತಿದೆ ಎಂದು ರಾಜ್ಯ ರೈತ ಸಂಘ ಆರೋಪಿಸಿದೆ.
MSP (Minimum Support (Price) ಸೂಕ್ತ ಬೆಂಬಲ ಬೆಲೆ ನೀಡಿ ರಾಗಿ, ಭತ್ತ ಖರೀದಿಸಬೇಕು. ದೊಡ್ಡ ರೈತರಾಗಲಿ, ಸಣ್ಣರೈತರಾಗಲಿ ಆಹಾರೋತ್ಪನ್ನ ರೈತರು ಬೆಳೆಯುವುದೇ ತಪ್ಪಾ !?
ಸೂಕ್ತ ಬೆಂಬಲ ಬೆಲೆ ಸಹಿತ ಫಸಲ್ ಭೀಮಾ, ಯಶಸ್ವಿನಿ, ಕಂದಾಯ ಇಲಾಖೆಯಲ್ಲಿ ಭೂ ಮಾಫಿಯಾ, ಸರ್ವರ್ ಸಮಸ್ಯೆ ನಿವಾರಣೆಯಾಗಬೇಕು ಎಂದು ಒತ್ತಾಯಿಸಿದೆ. ಈ ಬಗ್ಗೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ & ಹಸಿರುಸೇನೆಯ ಯುವ ಮುಖಂಡರು, ನಗರ- ಗ್ರಾಮಾಂತರಗಳ ಮುಖಂಡರು ಭಾಗಿಯಾಗಿದ್ದರು.
- ಸುರೇಶ್ ಬಾಬು 'ಪಬ್ಲಿಕ್ ನೆಕ್ಸ್ಟ್' ಯಲಹಂಕ
PublicNext
09/02/2022 07:47 am