ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ-2021 ಉದ್ಟಾಟಿಸಿದ ಹಾಡಿ ಮಹಿಳೆ

ಬೆಂಗಳೂರು : ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ-2021 ಕೃಷಿ ಸಾಧಕಿ ಹೆಚ್ ಡಿ ಕೋಟೆಯ ಹಾಡಿಯೊಂದರ ಪ್ರೇಮಾ ಉದ್ಘಾಟಿಸಿದರು.

ಯಲಹಂಕದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ( ಜಿಕೆವಿಕೆ) ಅವರಣದಲ್ಲಿ ಕೃಷಿ ಮೇಳ-2021 ಅಯೋಜನೆ ಮಾಡಲಾಗಿದ್ದು, 4 ದಿನಗಳು ನಡೆಯುವ ಕೃಷಿ ಮೇಳಕ್ಕೆ ಇಂದು ಚಾಲನೆ ನೀಡಲಾಗಿದ್ದು, ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಹಾಡಿಯೊಂದರ ರೈತ ಸಾಧಕಿ ಪ್ರೇಮ ಉದ್ಘಾಟನೆ ಮಾಡಿದರು ಕಾರ್ಯಕ್ರಮದಲ್ಲಿ ಡಾ. ಎಸ್. ರಾಜೇಂದ್ರ ಪ್ರಸಾದ್ ಉಪಕುಲಪತಿಗಳು, ಜಿಕೆವಿಕೆ. ಡಾ.ಎಸ್. ಅಯ್ಯಪ್ಪನ್ ನಿವೃತ್ತ ಕುಲಪತಿಗಳು, ಎಸ್. ಆರ್. ಉಮಾಶಂಕರ್, ಬ್ರಿಜೇಶ್ ಕುಮಾರ್ ದಿಕ್ಷೀತ್ ಭಾಗವಹಿಸಿದರು.

ಇನ್ನೂ ರಾಜ್ಯ ರಾಜ್ಯಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಬಿಟ್ ಕಾಯಿನ್ ಬಿಸಿ ಕೃಷಿ ಮೇಳಕ್ಕೂ ತಟ್ಟಿದೆ, ಕೃಷಿ ಮೇಳ-2021 ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬೇಕಾದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಸಚಿವರಾದ ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಡಾ. ಸುಧಾಕರ್, ಶಂಕರ್ ಬಿ ಪಾಟೇಲ ಗೈರಾದ್ರು. ವಿಪರ್ಯಾಸವೆಂದರೆ ಜಿಟಿ‌ ಜಿಟಿ ಮಳೆಯಿಂದ ಕೃಷಿ ಮೇಳ ಕೆಸರಿನಿಂದ ಕೂಡಿತ್ತು.

Edited By : Nagesh Gaonkar
Kshetra Samachara

Kshetra Samachara

11/11/2021 03:24 pm

Cinque Terre

540

Cinque Terre

0