ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯ ಬೂದಿಗೆರೆ ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವು!

ಬೆಂಗಳೂರು: ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಕೆರೆಯಲ್ಲಿ ಈಜಲು ಹೋಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಬೆಂಗಳೂರಿನ ಉದಯನಗರ ನಿವಾಸಿ ಬಿವಿನ್(18) ಮೃತಪಟ್ಟ ದುರ್ದೈವಿ. ದುರಂತ ಹಿನ್ನೆಲೆ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು & ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವನಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಕಗ್ಗಲಹಳ್ಳಿಯ ಶ್ರೀಶನಿಮಹಾತ್ಮ ದೇವಾಲಯಕ್ಕೆ ಬೆಂಗಳೂರಿನಿಂದ 4 ಜನ ವಿದ್ಯಾರ್ಥಿಗಳು ಬಂದಿದ್ದರು ಎನ್ನಲಾಗ್ತಿದೆ. ಮಧ್ಯಾಹ್ನ‌ ಕೆರೆ ಬಳಿ ಚಿಕನ್ ಊಟ ಮಾಡಿಕೊಂಡು ತಿಂದು, ನಂತರ ಈಜಲು ಮುಂದಾಗಿದ್ದರು. ಈ ವೇಳೆ ನಾಲ್ಕು ಜನರಲ್ಲಿ ಓರ್ವ ಈಜಲು ಹೋಗಿ ದುರಂತ ಅಂತ್ಯವಾಗಿದ್ದಾನೆ.

2021ರ ನವಂಬರ್ ಮಳೆಗೆ ಕೆರೆಕೋಡಿ ಬಿದ್ದು, ನೀರಿತ್ತು. ಇದೀಗ ಮೇ 18 ಮಳೆಗೆ ಕೆರೆ ಕೊಡಿ ಬಿದ್ದ ನಂತರ ಬೂದಿಗೆರೆ ಕೆರೆಯಲ್ಲಿ ಇದು ಎರಡನೇ ಸಾವು ಸಂಭವಿಸಿದೆ.

SureshBabu Public Next ದೇವನಹಳ್ಳಿ..

Edited By : Manjunath H D
Kshetra Samachara

Kshetra Samachara

05/06/2022 11:02 am

Cinque Terre

4.68 K

Cinque Terre

0

ಸಂಬಂಧಿತ ಸುದ್ದಿ