ದೊಡ್ಡಬಳ್ಳಾಪುರ: ಮುನೇಶ್ವರಸ್ವಾಮಿ ಪೂಜೆಗಾಗಿ ಪೂಜಾ ಸಾಮಾಗ್ರಿಗಳನ್ನ ತರಲು ಬೈಕ್ ನಲ್ಲಿ ಹೊರಟ ಅಪ್ಪ-ಮಗ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕಿಡಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಶಿವಪುರ ಗ್ರಾಮದ ಬಳಿ ರಸ್ತೆ ಅಪಘಾತ ನಡೆದಿದ್ದು, ಘಟನೆಯಲ್ಲಿ ತಂದೆ ಮೀಸೆ ರಾಮಯ್ಯ (64) ಮಗ ನಾರಾಯಣ್ (40) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಸೊಣ್ಣಪ್ಪನಹಳ್ಳಿಯ ನಿವಾಸಿಗಳಾಗಿದ್ದಾರೆ.
ಮನೆಯಲ್ಲಿ ಮುನೇಶ್ವರಸ್ವಾಮಿ ಪೂಜಾ ಕಾರ್ಯಕ್ರಮ ಇದ್ದು, ಇಂದು ಬೆಳಿಗ್ಗೆ ತಂದೆ, ಮಗ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ತರಲು ಸ್ಕೂಟರ್ ನಲ್ಲಿ ದೊಡ್ಡಬಳ್ಳಾಪುರ ನಗರಕ್ಕೆ ಹೊರಟ್ಟಿದ್ದರು.
ಈ ಸಮಯದಲ್ಲಿ ಸ್ಕೂಟರ್ ಮರಕ್ಕೆ ಗುದ್ದಿ ಸಾವನ್ನಪ್ಪಿರುವುದ್ದಾಗಿ ಹೇಳಲಾಗುತ್ತಿದೆ. ಮತ್ತೊಂದೆಡೆ ಅಪರಿಚಿತ ವಾಹನ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸಾವನ್ನಪ್ಪಿರುವ ಅನುಮಾನ ಕೂಡ ಇದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
15/03/2022 05:06 pm