ಆನೇಕಲ್:ಕುಡಿದ ಮತ್ತಿನಲ್ಲಿ ಇನೋವಾ ಕಾರ್ ಚಾಲಾಯಿಸಿದ್ದ ವ್ಯಕ್ತಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನೊಪ್ಪಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲೂ ಕ್ಯಾಪ್ಚರ್ ಆಗಿದೆ.
ಮೃತ ಬೈಕ್ ಸವಾರನನ್ನ ಗೊಲ್ಲಹಳ್ಳಿ ನಿವಾಸಿ ರಘೇಶ್ (40) ದಲಿತ ಹೋರಾಟಗಾರ ಹಾಗೂ ದಲಿತ ಮುಖಂಡ ಎಂದು ಗುರುತಿಸಲಾಗಿದೆ.
ಆನೇಕಲ್ ತಾಲೂಕಿನ ಮುತ್ಯಾಲಮಡುವು ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Kshetra Samachara
07/03/2022 10:56 am