ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈಕ್‌ಗೆ ಗುದ್ದಿದ ಸಚಿವ ಕಾರಜೋಳ ಕಾರು: ಸವಾರನ ಕಾಲು ಮುರಿತ

ಬೆಂಗಳೂರು: ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಕಾರು ಬೈಕ್ ಗೆ ಗುದ್ದಿರುವ ಘಟನೆ ನೆಲಮಂಗಲ ತಾಲೂಕಿನ ಕುಲುವನಹಳ್ಳಿಯಲ್ಲಿ ನಡೆದಿದೆ. ಸಚಿವರ KA 63 G 7777 ನಂಬರಿನ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು, ಅಪಘಾತದ ಬಳಿಕ ಗಾಯಾಳುವನ್ನ ಆಂಬುಲೆನ್ಸ್‌ನಲ್ಲಿ ಕಳುಹಿಸಿದ ಸಚಿವ ಕಾರಜೋಳ ನಂತರ ಆಸ್ಪತ್ರೆಗೆ ಧಾವಿಸಿದ್ದಾರೆ.

ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದೆ. ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್‌ಗೆ ಸಚಿವರು ಸೂಚಿಸಿದ್ದಾರೆ. ನೆಲಮಂಗಲ ಸಂಚಾರಿ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Manjunath H D
Kshetra Samachara

Kshetra Samachara

25/11/2021 07:22 pm

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ