ಬಾಗಲಕೋಟೆ: ಜಿಲ್ಲೆಗೆ ಘೋಷಣೆ ಮಾಡಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಖಾಸಗಿ ಸಹಭಾಗಿತ್ವ (ಪಬ್ಲಿಕ್ ಪ್ರೈವೆಟ್ ಪಾರ್ಟನರಶಿಫ್ )ದಲ್ಲಿ ಆರಂಭಿಸುವುದು ಬೇಡ ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ನಗರದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕರವೇ ಅಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ನಾನಾ ರೀತಿಯ ಹೋರಾಟಗಳ ಫಲವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರದಲ್ಲಿನಡೆದ ಸಮಾರಂಭದಲ್ಲಿ ಪಿಪಿಪಿ ಯೋಜನೆಯಡಿ ಬಾಗಲಕೋಟೆ ಮತ್ರು ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಆರಂಭಿಸುವುದಾಗಿ ಹೇಳಿದ್ದಾರೆ. ಅದನ್ನು ಬಿಟ್ಟು ಸರ್ಕಾರದ ಮಾಲೀಕತ್ವದಲ್ಲೆ ಆರಂಭಿಸುವಂತೆ ಆಗ್ರಹಿಸಿದರು.
ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ 2014-15 ರಲ್ಲೇ ಘೋಷಣೆ ಆದ ಬಳಿಕ ನವನಗರದಲ್ಲಿ 48 ಎಕರೆ ಭೂಮಿ ನಿಗದಿ ಪಡಿಸಲಾಗಿದೆ. ಭಾರತೀಯ ಮೆಡಿಕಲ್ ಕೌನ್ಸಿಲ್ ನಿಯಮಾವಳಿ ಪ್ರಕಾರ ಅರ್ಹತೆ ಪಡೆದುಕೊಂಡಿದೆ. ಆದರೂ ಹಗ್ಗ ಜಗ್ಗಾಟ ನಡೆಯಿತ್ತಿದೆ. ಇದೀಗ ಖಾಸಗಿ ಸಹಭಾಗಿತ್ವದ ಮಾತುಗಳು ಶುರುವಾಗಿದ್ದು ದುರದೃಷ್ಟಕರ ಎಂದರು.
ಯಾವುದೇ ಕಾರಣಕ್ಕೂ ಸರ್ಕಾರ ಪಿಪಿಪಿ ಯೋಜನೆಯಡಿ ವೈದ್ಯ ಕಾಲೇಜು ಆರಂಭಕ್ಕೆ ಬಿಡುವುದಿಲ್ಲ. ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಪೂರ್ವ ನಿಗದಿತ ಸ್ಥಳದಲ್ಲಿ ಸರ್ಕಾರದ ಮಾಲೀಕತ್ವದಲ್ಲೆ ಆರಂಭಗೊಳ್ಳಬೇಕು ಇಲ್ಲದೆ ಹೋದಲ್ಲಿ ಜನಪ್ರತಿನಿಧಿಗಳು ಜಿಲ್ಲೆಗೆ ಬಂದಾಗ ಮುಜುಗರ ಎದುರಿಸುವಂತಹ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಆತ್ಮಾರಾಮ ನೀಲನಾಯಕ, ಮಲ್ಲು ಕಟ್ಟಿಮನಜ, ಬಸವರಾಜ ಅಂಬಿಗೇರ ಇತರರು ಇದ್ದರು.
PublicNext
06/10/2022 02:23 pm