ಬಾಗಲಕೋಟೆ: ಸಾಕಷ್ಟು ಹಗರಣಗಳಲ್ಲಿ ಕೋಟ್ಯಾಂತರ ರೂ. ರಾಷ್ಟ್ರೀಯ ಸಂಪತ್ತು ಲೂಟಿ ಮಾಡಿರುವ ಕಾಂಗ್ರೆಸ್ಸಿಗರಿಗೆ ರಾಜ್ಯ ಸರ್ಕಾರ ಟೀಕಿಸುವ ನೈತಿಕತೆ ಇಲ್ಲವೆಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರದಲ್ಲಿ ಯುಪಿಎ ಸರ್ಕಾರದಲ್ಲಿ ನೂರರಷ್ಟು ಭ್ರಷ್ಟಾಚಾರ ಮಾಡಿದವರು ಜಾಮೀನಿನ ಮೇಲೆ ಹೊರಗಿದ್ದಾರೆ.ಇದು ಜನರಿಗೂ ಗೊತ್ತಿರುವ ಸಂಗತಿ. ಇಂತಹ ಸನ್ನಿವೇಶದಲ್ಲಿ ಅವರೆಲ್ಲ ಕರ್ನಾಟಕದ ಬಗೆಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಜನರ ಕಣ್ಣಿಗೆ ಮಣ್ಣೇರಚುವ ತಂತ್ರವಾಗಿದೆ. ದೇಶದಾದ್ಯಂತ ಜನತೆಯ ಅವಗಣನೆಗೆ ಗುರಿಯಾಗಲು ಕಾಂಗ್ರೆಸ್ ನಡೆಸಿದ ಅವ್ಯವಹಾರ ಮತ್ತು ದುರಾಚಾರಗಳೇ ಕಾರಣವೆಂದು ಅವರು ತಿಳಿಸಿದ್ದಾರೆ.
PublicNext
02/10/2022 02:13 pm