ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ವೇದಿಕೆಯಲ್ಲಿ ಹೆಜ್ಜೆ ತಪ್ಪಿ ಜಾರಿದ ಸಿದ್ದರಾಮಯ್ಯ

ಮುಧೋಳದಲ್ಲಿಂದು ಮಾಜಿ ಸಚಿವ ಆರ್.ಬಿ. ‌ತಿಮ್ಮಾಪುರ ಜನ್ಮೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಹೆಜ್ಜೆ ತಪ್ಪಿ ಕಾಲು ಜಾರಿದರು. ಈ ವೇಳೆ ವೇಳೆ ಬೆಂಬಲಿಗರು ಹಿಡಿದು ಎತ್ತಿದ ಪ್ರಸಂಗ ನಡೆದಿದೆ.

ಮಾಜಿ ಸಚಿವ‌ ತಿಮ್ಮಾಪುರ ಅವರ 60 ನೇ ಜನ್ಮ ದಿನದ ಅಂಗವಾಗಿ ಬೃಹತ್ ಜನ್ಮೋತ್ಸವ ‌ಸಮಾರಂಭ ಆಯೋಜಿಸಲಾಗಿತ್ತು. ಜಮಖಂಡಿಯಲ್ಲಿ ದಿ.ಶಾಸಕ ಸಿದ್ದು ನ್ಯಾಮಗೌಡ ಅವರ ಕಂಚಿನ ಪ್ರತಿಮೆ ಅನಾವರಣದಲ್ಲಿ ಭಾಗವಹಿಸಿ ಅಲ್ಲಿಂದ ಮುಧೋಳಕ್ಕೆ ಆಗಮಿಸಿದ ಅವರು ಬೆಂಬಲಿಗರೊಂದಿಗೆ ಜನ್ಮೋತ್ಸವ ಕಾರ್ಯಕ್ರಮ ವೇದಿಕೆ ಹತ್ತಿದ ಕಾಲು ಜಾರಿದರು.

ಈ ವೇಳೆ ಅವರ ಬೆಂಬಲಿಗರು ಅವರನ್ನು ಕೆಳಕ್ಕೆ ಬೀಳುವ‌ ಮುನ್ನವೇ ಹಿಡಿದುಕೊಂಡರು. ಬೆಂಬಲಿಗರು ಆಸರೆಗೆ ಬಾರದಿದ್ದಲ್ಲಿ ವೇದಿಕೆಯಿಂದ ಕೆಳಗೆ ಬೀಳುವ ಸಾಧ್ಯತೆಗಳಿದ್ದವು. ಮೆಟ್ಟಿಲು ಜಾರಿದ ವೇಳೆ ಸಿದ್ದರಾಮಯ್ಯ ಅವರಿಗೆ ಏನೂ ಅನಾಹುತ ಆಗಿಲ್ಲ.

Edited By :
PublicNext

PublicNext

27/09/2022 06:18 pm

Cinque Terre

33.42 K

Cinque Terre

17