ಬಾಗಲಕೋಟೆ : ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಭೂ ಬ್ಯಾಂಕ್ ಸ್ಥಿತಿಗತಿ ಬಗೆಗೆ ಶ್ವೇತಪತ್ರ ಹೊರಡಿಸಬೇಕು ಎಂದು ರೈತಮುಖಂಡ ನಾಗೇಂದ್ರ ಒತ್ತಾಯಿಸಿದರು.
ನಗರದಲ್ಲಿಂದು ಮಾಧ್ಯಮದ ಜತೆ ಮಾತನಾಡಿದ ಅವರು
2008 ರಲ್ಲಿ ಕೈಗಾರಿಕೆ ಉದ್ದೇಶಕ್ಕೆ ಉದ್ಯಮಿಗಳಿಗೆ ಅಗತ್ಯ ಭೂಮಿ ನೀಡಲು ಭೂ ಬ್ಯಾಂಕ್ ಸ್ಥಾಪಿಸಿ ಅದರಡಿ ಸಾವಿರಾರು ಎಕರೆ ಭೂಮಿ ಪಡೆದುಕೊಳ್ಳಲಾಗಿದೆ. ಅದರಲ್ಲಿ ಕೈಗಾರಿಕೆ ಉದ್ದೇಶಕ್ಕೆ ಕೊಟ್ಟ ಭೂಮಿ ಎಷ್ಟು , ಇನ್ನೂ ಎಷ್ಟು ಭೂಮಿ ಇದೆ ಎನ್ನುವ ಬಗೆಗೆ ಸರ್ಕಾರ ಶ್ವೇತ ಪತ್ರ ಹೊರಡಿಸಬೇಕು ಎಂದರು.
ಸರ್ಕಾರದ ಬಳಿ ಸಾಕಷ್ಟು ಭೂಮಿ ಇದ್ದರೂ ಕೈಗಾರಿಕೆ ಸಚಿವರು ತಮ್ಮ ಕ್ಷೇತ್ರದಲ್ಲಿನ ಹಲಕುರ್ಕಿ ಗ್ರಾಮದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ವಿಮಾನ ನಿಲ್ದಾಣ ಸ್ಥಾಪನೆಗಾಗಿ ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾಗಿರುವುದು ದುರದೃಷ್ಟಕರ.
ಈಗಾಗಲೇ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತ ಪಡಿಸಿದ್ದೇವೆ. ವಾಪಸ್ ಅಲ್ಲಿಗೆ ತೆರಳಿ ವಿವರ ಮಾಹಿತಿ ಪಡೆದು ಹೋರಾಟ ಇನ್ನಷ್ಟು ತೀವ್ರ ಗೊಳಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕೈಗಾರಿಕೆ ಸಚಿವರು ಫಲವತ್ತಾದ ಭೂಮಿ ಸ್ವಾಧೀನ ಚಿಂತನೆ ಕೈಬಿಡಬೇಕು ಎಂದರು.
ಇದೇ ವೇಳೆ ಬಾದಾಮಿಯ ವೀರಪುಲಿಕೇಶಿ ಪತ್ತಿನ ಸಹಕಾರಿ ಸಂಘದಲ್ಲಿನ ಅವ್ಯವಹಾರ ಕುರಿತು ಪ್ರಸ್ತಾಪಿಸಿದ ಅವರು ರೈತರು ಸೇರಿದಂತೆ ಬೇರೆಯವರ ಹೆಸರಿನಲ್ಲಿ ಸಾಲ ಪಡೆದು ಅದಕ್ಕೆ ಅಧಿಕ ಬಡ್ಡಿ ಹಾಕಿ ರೈತರ ಮನೆಗಳನ್ನು ಹರಾಜು ಹಾಕುವ ಕೆಲಸ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದರು.
PublicNext
24/09/2022 03:29 pm