ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: 'ಮತ್ತೆ ಅಧಿಕಾರ ಕೊಟ್ರೆ, ನೀರಾವರಿಗೆ 2 ಲಕ್ಷ ಕೋಟಿ ಖರ್ಚು ಮಾಡ್ತೇನೆ' ; ಸಿದ್ದರಾಮಯ್ಯ

ಬಾಗಲಕೋಟೆ: ನೀವು ಆಶಿರ್ವಾದ ಮಾಡಿ 2023 ರಲ್ಲಿ ಅಧಿಕಾರ ನೀಡಿದರೆ ಸಮಗ್ರ ನೀರಾವರಿ ಅಭಿವೃದ್ದಿಗೆ 2 ಲಕ್ಷ ಕೋಟಿ ರೂ ಖರ್ಚು ಮಾಡಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಜಮಖಂಡಿ ತಾಲೂಕು ಹಿರೇಪಡಸಲಗಿ ಗ್ರಾಮದ ಜಮಖಂಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಲಿಂ. ಸಿದ್ದು ನ್ಯಾಮಗೌಡ ಅವರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಪ್ರತಿ ವರ್ಷ 40 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡುವುದರೊಂದಿಗೆ ಕೃಷ್ಣಾ ಮೇಲ್ದಂಡೆ ಯೋಜನೆ, ಎತ್ತಿನ ಹೊಳೆ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ ಎಂದರು.

ಕೂಡಲಸಂಗಮದಲ್ಲಿ ನೀರಾವರಿಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆ ಅದರಂತೆ ನಾನು ನಡೆದುಕೊಂಡಿದ್ದೆನೆ. ಆದರೆ ಬಿಜೆಪಿಯವರು ಸುಳ್ಳು ಹೇಳುವ ಕಾರ್ಯ ಮಾಡುತ್ತಿದ್ದಾರೆ, ಅವರೆಷ್ಟು ಖರ್ಚು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದರು. ರೈತರ ಸಾಲ ಮನ್ನಾ ಮಾಡಿದ್ದು ನಾನೇ, ಯಾರು ಉಪವಾಸದಿಂದ ಇರಬಾರದು ಎಂದು ಬಡವರಿಗೆ ಸುಮಾರು 4 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಿದ್ದೆನೆ ದೀನ ದಲಿತರ, ಅಲ್ಪಸಂಖ್ಯಾತರ, ರೈತರ, ಬಡವರ ಅಭಿವೃದ್ದಿಗೆ ಪ್ರಾಮಾಣ ಕವಾಗಿ ಕಾರ್ಯ ಮಾಡಿದ್ದೆನೆ ಎಂದರು.

ನ್ಯಾಮಗೌಡ ಅವರು ರಾಜ್ಯದ ಜನರಿಗೆ ಸ್ಪೂರ್ತಿ ತುಂಬುವ ರೈತ ನಾಯಕರಾಗಿದ್ದರು, ಅವರು ರೈತರ ಒಳಿತಿಗಾಗಿ ಬದುಕು ಹಸಿನಾಗಿಸಲು 98 ಲಕ್ಷ ರೂಗಳಲ್ಲಿ 11 ತಿಂಗಳಿನಲ್ಲಿ ರೈತರಿಂದ ಬ್ಯಾರೇಜ್ ನಿರ್ಮಿಸಿದ್ದು ಇತಿಹಾಸವಾಗಿದೆ, ಸಿದ್ದು ನ್ಯಾಮಗೌಡ ತಮ್ಮ ಬದುಕನ್ನು ಸಾರ್ಥಕಗೊಳಿಸಿದ್ದಾರೆ ಎಂದರು.

ರೈತರ ಬದುಕು ಆರ್ಥಿಕವಾಗಿ ಹಸನಾಗಬೇಕಾದರೆ ಅವರ ಜಮಿನುಗಳಿಗೆ ನೀರು ಸಿಗಬೇಕು, ನೀರಾವರಿ ಇಲ್ಲದಿದ್ದರೆ ಕೃಷಿಯಲ್ಲಿ ಲಾಭ ಇಲ್ಲ, ಇದನ್ನು ನೋಡಿ ಸಿದ್ದು ನ್ಯಾಮಗೌಡ ಅವರು ರೈತರಿಂದ ವಂತಿಕೆ, ಶ್ರಮದಾನ ಮೂಲಕ 25 ಗ್ರಾಮಗಳಿಗೆ 40 ಸಾವಿರ ಎಕರೆ ಜಮಿನಿಗಳಿಗೆ ನೀರಾವರಿ ಒದಗಿಸಿದ್ದರಿಂದ ಇಂದು ಈ ಭಾಗದಲ್ಲಿ ಕಬ್ಬು ಬೆಳೆ, ಕಬ್ಬಿನ ಕಾರ್ಖಾನೆಗಳು ಬಂದಿದ್ದರಿಂದ ಆರ್ಥಿಕವಾಗಿ ರೈತರು ಬೆಳೆಯುತಿದ್ದಾರೆ ಎಂದರು.

ಸಿದ್ದು ನ್ಯಾಮಗೌಡ ಒಬ್ಬ ಅಸಾಮಾನ್ಯ ಶಾಸಕರಾಗಿದ್ದರು, ಅವರು ಎಲ್ಲ ನಾಯಕರ ಜೊತೆ ಒಳ್ಳೆ ಒಡನಾಟಹೊಂದಿ ಅಜಾತಶತೃವಾಗಿ ವಿರೋಧಿಗಳನ್ನು ಸ್ನೇಹಿತರಂತೆ ಕಾಣುತಿದ್ದರು ಎಂದರು. ಅಧಿಕಾರ ಶಾಶ್ವತವಲ್ಲ ಅಧಿಕಾರ ಇದ್ದಾಗ ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು ಜನಪರವಾದಂತ ರಾಜಕಾರಣ ನಿಜವಾದ ರಾಜಕಾರಣ ಎಂದು ಗುರುತಿಸಲ್ಪಡುತ್ತದೆ ಎಂದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಎಸ್.ಆರ್.ಪಾಟೀಲ , ಮಾಜಿ ಸಚಿವ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ,

ವೇದಿಕೆಯ ಕೆಳಭಾಗದ ಸಭಿಕರ ಜಾಗದಲ್ಲಿ ವಿಜಯಪೂರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.

ಕೊಲ್ಹಾರ ಕಲ್ಲಿನಾಥ ಸ್ವಾಮೀಜಿ, ಮಮದಾಪೂರ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಶಾಸಕ ಆನಂದ ನ್ಯಾಮಗೌಡ ಅಧ್ಯಕ್ಷತೆವಹಿಸಿದ್ದರು.

Edited By : Abhishek Kamoji
PublicNext

PublicNext

27/09/2022 08:00 pm

Cinque Terre

11.46 K

Cinque Terre

2