ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಸಿದ್ರಾಮಯ್ಯ ಮೈಯಲ್ಲಿ ಔರಂಗಜೇಬ್ ಅಥವಾ ಘಜ್ನಿ ರಕ್ತ ಹರೀತಿರಬಹುದು

ಬಾಗಲಕೋಟೆ: ಸತತ ಹಿಂದು ವಿರೋಧಿ ಹೇಳಿಕೆ ನೀಡುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಡಿಎನ್ಎ ಟೆಸ್ಟ್ ಮಾಡಿಸಬೇಕೆಂದು ಶ್ರೀರಾಮ ಸೇನೆ‌ ಮುಖ್ಯಸ್ಥ ಪ್ರಮೋದ ‌ಮುತಾಲಿಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಕೆರೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪೊಲೀಸರು- ಹಿಂದೂ ಕಾರ್ಯಕರ್ತರ ಘರ್ಷಣೆ ಹಿನ್ನೆಲೆ ರಾಚೋಟೇಶ್ವರ ದೇವಸ್ಥಾನದಲ್ಲಿ ಯುವಕರನ್ನು ಭೇಟಿ ಮಾಡಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ ಚಿವುಟಿ ನೋಡಿದರೂ ರಕ್ತ ಕೆಂಪಾಗಿರುವುದಿಲ್ಲ. ಅದು ಕೂಡ ಹಸಿರಾಗಿದೆ. ಅವರ ಹುಟ್ಟಿನ‌ ಮೂಲ ತಿಳಿಯಬೇಕು ಅದು ಔರಂಗಜೇಬನದ್ದೋ ಅಥವಾ ಘಜನಿಯದ್ದೋ ಎಂಬುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ.

Edited By : Somashekar
PublicNext

PublicNext

27/09/2022 05:52 pm

Cinque Terre

22.52 K

Cinque Terre

7