ರಬಕವಿ-ಬನಹಟ್ಟಿ: ವಾಹನ ರಿಪೇರಿಗೆ ಬಂದಂತಹ ಸಂದರ್ಭದಲ್ಲಿ ಕರ್ಕಶ ಶಬ್ದ ಬರುವ ಸೈಲೆನ್ಸರ್ ಸೇರಿದಂತೆ ವಾಹನ ಮಾಡಿಫೈ ಮಾಡುವುದು ಬೇಡ ಎಂದು ಪಿಎಸೈ ಅಪ್ಪಣ್ಣ ಐಗಳಿ ಹೇಳಿದರು.
ತೇರದಾಳದ ಮಹಾವೀರ ವೃತ್ತದ ಬಳಿಯಲ್ಲಿ ಮಂಗಳವಾರ ಹಮ್ಮಿಕೊಂಡ ತೇರದಾಳ ತಾಲೂಕ ಮೆಕ್ಯಾನಿಕ್ ಮತ್ತು ಕೂಲಿ ಕಾರ್ಮಿಕರ ಸಂಘದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಾಹನ ಚಲಾವಣೆ ಸಂದರ್ಭದಲ್ಲಿ ಕಾಗದ ಪತ್ರಗಳು ಸೇರಿದಂತೆ ನಿಯಮಗಳನ್ನು ಪಾಲಿಸಬೇಕು. ಮೆಕ್ಯಾನಿಕ್ ಗಳು ಯಾವುದೇ ಸಮಯದ ನಿಗದಿಯಿಲ್ಲದೇ ಸೇವೆ ಸಲ್ಲಿಸುವುದು ಸಂಚಾರಿಗಳಿಗೆ ಅನುಕೂಲಕರ ಸೇವೆ ತಮ್ಮದಾಗಿದೆ ಎಂದರು.
ಸ್ಥಳೀಯ ಹಿರೇಮಠದ ಗಂಗಾಧರದೇವರು, ಮೌಲಾನಾ ಮಂಜೂರು ಆಲಮ ಅವರು ಜ್ಯೋತಿ ಬೆಳಗಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರು ಮೆಕ್ಯಾನಿಕ್ ಮಿತ್ರ ವೆಲಫೇರ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಆರ್.ನಾಗೇಶ, ಬೆಳಗಾವಿಯ ಕರಣ್ ಜವಳಿ ಉದ್ಯಮಿ ಅಧ್ಯಕ್ಷ ಅಲ್ಲಾಬಕ್ಷ ಅಲಾಸ್, ಉಪಾಧ್ಯಕ್ಷರಾದ ಪ್ರವೀಣ್ ಬಾವಲೆ, ಭೀಮಪ್ಪ ಸಾವಳಗಿ, ಅಯೂಬ್ ತಾಂಬೋಳಿ ಪ್ರಕಾಶ್ ಗೋಕಾಕ, ರಾಜೇಂದ್ರ ಮುಧೋಳ. ಹಣಮಂತ ಮೂಡಲಗಿ, ಆರಿಫ್ ಜಮಖಂಡಿ, ಜ್ಯೋತಿಭಾ ಲೋಹರ ಸೇರಿದಂತೆ ಸರ್ವ ಸದಸ್ಯರು ಇದ್ದರು.
Kshetra Samachara
07/01/2025 07:57 pm