", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/412788_1737868793_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen rabakavi" }, "editor": { "@type": "Person", "name": "9342210542" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಬಕವಿ-ಬನಹಟ್ಟಿ: ತೇರದಾಳ ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ ಧ್ವಜಾರೋಹಣವನ್ನು ತಹಶೀಲ್ದಾರ್ ವಿಜ...Read more" } ", "keywords": "Node,Bagalkot,News", "url": "https://publicnext.com/node" } ರಬಕವಿ-ಬನಹಟ್ಟಿ: ದೇಶದ ಏಕತೆ- ಸಮಗ್ರತೆಯ ದಿನ- ಶಾಸಕ ಸಿದ್ದು ಸವದಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬಕವಿ-ಬನಹಟ್ಟಿ: ದೇಶದ ಏಕತೆ- ಸಮಗ್ರತೆಯ ದಿನ- ಶಾಸಕ ಸಿದ್ದು ಸವದಿ

ರಬಕವಿ-ಬನಹಟ್ಟಿ: ತೇರದಾಳ ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ ಧ್ವಜಾರೋಹಣವನ್ನು ತಹಶೀಲ್ದಾರ್ ವಿಜಯಕುಮಾರ ಕಡಕೋಳ ನೆರವೇರಿಸಿದರು.

ಶಾಸಕ ಸಿದ್ದು ಸವದಿ ಭಾವಚಿತ್ರ ಪೂಜೆ ನೆರವೇರಿಸಿ, ಮಾತನಾಡಿ, ಅಹಿಂಸಾ ಹೋರಾಟದ ಮೂಲಕ ಬ್ರಿಟಿಷರು ಹೆದರಿ, ಸ್ವಾತಂತ್ರ್ಯ ನೀಡಿದ್ದರು. ರಚನಾ ಸಭೆಯಿಂದ ಬೃಹತ್ತಾದ ಪವಿತ್ರ ಸಂವಿಧಾನವನ್ನು ಡಾ.ಅಂಬೇಡ್ಕರ್ ರಚಿಸಿದರು. ಭಾರತ ಸಂವಿಧಾನವು ಧಾರ್ಮಿಕ ಗ್ರಂಥಗಳಿಗಿಂತಲೂ ಶ್ರೇಷ್ಟವಾದದ್ದು. ದೇಶದ ಅಭಿವೃದ್ಧಿಗೆ ಸಂವಿಧಾನ ಕೊಡಮಾಡಿದ ಡಾ.ಅಂಬೇಡ್ಕರ್ ಕಾರ್ಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೆನೆ ಎಂದರು.

ತಹಶೀಲ್ದಾರ್ ವಿಜಯಕುಮಾರ ಕಡಕೋಳ ಮಾತನಾಡಿ, ದೇಶದ ರಾಷ್ಟ್ರಧ್ವಜ, ಗೀತೆ, ಲಾಂಛನ ಗೌರವಿಸುವುದು ಕರ್ತವ್ಯಗಳಾಗಿವೆ. ದೇಶದ ಏಕತೆ ಮತ್ತು ಸಮಗ್ರತೆಯ ಹೆಮ್ಮೆಯ ಕ್ಷಣದಲ್ಲಿ ಸಂಭ್ರಮಿಸುತ್ತೆವೆ. ನೂತನ ತಾಲೂಕು ಆಡಳಿತ ಸಹಯೋಗದಲ್ಲಿ ಇಂತಹ ಅಭೂತಪೂರ್ವ ಕಾರ್ಯಕ್ರಮವು ಖುಷಿಪಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶಿಲ್ಪಾ ಗೌತಮ ರೋಡಕರ, ಉಪಾಧ್ಯಕ್ಷ ನಸ್ರೀನ್ ಬಾನು‌ ನಗಾರ್ಜಿ, ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ, ಉಪತಹಶಿಲ್ದಾರ ಶ್ರೀಕಾಂತ ಮಾಯನ್ನವರ, ಉಪನೊಂದಣಾಧಿಕಾರಿ ಎಸ್.ಪಿ. ಮುತ್ತಪ್ಪಗೋಳ, ಕಂದಾಯ ನಿರೀಕ್ಷಕ ಪ್ರಕಾಶ ಮಠಪತಿ, ಪಿಎಸೈ ಅಪ್ಪು ಐಗಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮಾಜಿ ಸೈನಿಕರು, ಜನಪ್ರತಿನಿಧಿಗಳು, ಮುಖಂಡರು, ವಿವಿಧ ಶಾಲಾ ಶಿಕ್ಷಕರು, ಮಕ್ಕಳು ಹಾಗೂ ನಾಗರಿಕರು ಇದ್ದರು. ಮಾಜಿ ಸೈನಿಕ ಸಂಜು ಬಾನೆ ಅವರಿಂದ ಧ್ವಜಹಸ್ತಾಂತರ ಕಾರ್ಯಕ್ರಮ ಜರುಗಿತು.

ತೆರೆದ ವಾಹನದಲ್ಲಿ ಧ್ವಜವಂದನೆ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Edited By : PublicNext Desk
Kshetra Samachara

Kshetra Samachara

26/01/2025 10:49 am

Cinque Terre

3.7 K

Cinque Terre

0