ರಬಕವಿ-ಬನಹಟ್ಟಿ: ಬನಹಟ್ಟಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ ಹಾಗೂಮಲ್ಲಿಕಾರ್ಜುನ ಸದ್ಬಕ್ತ ಮಂಡಳಿಯವರು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಶ್ರೀ ಮಲ್ಲಿಕಾರ್ಜುನ ದೇವರ ರಥೋತ್ಸವವು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ನಡೆಯಿತು,ನಗರದ ಮಧ್ಯ ಭಾಗದಲ್ಲಿರುವ ಮಂಗಳವಾರ ಪೇಟೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ಯವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಭಕ್ತರು ಬೆಳಿಗ್ಗೆಯಿಂದಲೇ ಮಲ್ಲಯ್ಯನ ದರ್ಶನ ಪಡೆದುಕೊಂಡು ಬೆಲ್ಲ ಹಂಚಿದರು. ದಿವಟಗಿ, ಆರುತಿ ಹಿಡಿದುಕೊಂಡು ಮಲ್ಲಿಕಾರ್ಜುನ ದರ್ಶನ ಪಡೆದುಕೊಂಡು ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ ವಾಗಿತ್ತು. ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆಗೈದು, ಭಕ್ತರಿಂದ ತಂಪು ಪಾನೀಯಗಳು ಹಾಗೂ ಪ್ರಸಾದ ಸೇವೆಗಳು ನಡೆದವು. ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನ್ನು ದರ್ಶನ ಪಡೆದು ಪುನಿತರಾದರು.
Kshetra Samachara
03/11/2024 04:42 pm