ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಭುವಿನ ಜಾತ್ರೆಗೆ ರೊಟ್ಟಿಬುತ್ತಿ ಪಾದಯಾತ್ರೆ ಮೆರವಣಿಗೆ

ರಬಕವಿ-ಬನಹಟ್ಟಿ : ತೇರದಾಳ ಕ್ಷೇತ್ರಾಧಿಪತಿ, ಶೂನ್ಯಸಿಂಹಾಸನಾಧೀಶ್ವರ ಅಲ್ಲಮಪ್ರಭುದೇವರ ನೂತನ ಕಟ್ಟಡ ಲೋಕಾರ್ಪಣೆ ನಿಮಿತ್ಯ ಹಳಿಂಗಳಿ ಸಮಸ್ತ ಗ್ರಾಮಸ್ಥರು ರೋಟ್ಟಿಬುತ್ತಿ ಸಮರ್ಪಣೆಯ ಪಾದಯಾತ್ರೆಯಲ್ಲಿ ಕಮರಿಮಠದ ಶರಣಬಸವದೇವರು ಪಾಲ್ಗೊಂಡು, ಮಾತನಾಡಿ, ಅಲ್ಲಮರ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಒಂದು ಖುಷಿವಿಚಾರವಾಗಿದೆ ಎಂದರು.

ಸುಮಾರು ಎಂಟು ಕಿ.ಮಿ ಅಂತರದ ಪಾದಯಾತ್ರೆಯಲ್ಲಿ ಗ್ರಾಮದ ಜೈನ, ಗಾಣಿಗ ಸಮುದಾಯ ಸೇರಿದಂತೆ ಎಲ್ಲಾ ಧರ್ಮಿಯರು ಭಾಗಿಯಾಗಿ, ಮಹಿಳೆಯರು ತಲೆಯ ಮೇಲೆ ರೊಟ್ಟಿ ಬುತ್ತಿ ಹೊತ್ತುಕೊಂಡು ಅಲ್ಲಮ, ಬಸವಣ್ಣ ನವರಿಗೆ ಜೈಕಾರ ಹಾಕುತ್ತಾ, ಮಂತ್ರಪಠಿಸುತ್ತಾ ಅಲ್ಲಮನ ಭಕ್ತಿಗೆ ಸಾಕ್ಷಿಯಾದರು. ಕರಡಿ ಮಜಲು ಸಾಂಪ್ರದಾಯಿಕ ವಾದ್ಯಗಳು ಮೆರವಣಿಗೆ ಗೆ ಕಳೆಕಟ್ಟಿದವು.

ಪಾದಯಾತ್ರೆಯಲ್ಲಿ ಶ್ರೀಗಳು ಸೇರಿ ಬಸಯ್ಯ ಮಠಪತಿ, ದೇವಲ ದೇಸಾಯಿ, ರಾಜು ನಂದೆಪ್ಪನವರ, ಗಂಗಪ್ಪ ಘನವಾಡಿ, ಈರಣ್ಣ ತೇಲಿ, ಸುರೇಶ ತೇಲಿ, ಭೀಮಪ್ಪ ತೇಲಿ, ರಾಜು ದೇಸಾಯಿ, ಸುರೇಶ ದೇಸಾಯಿ, ಅಶೋಕ ದೇಸಾಯಿ, ರಾಜು ಲೋಕನ್ನವರ, ಗಂಗವ್ವ ಘನವಾಡಿ, ಸುರೇಖಾ ತೇಲಿ ಸೇರಿದಂತೆ ನೂರಾರು ಭಕ್ತರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

03/11/2024 12:15 pm

Cinque Terre

4.4 K

Cinque Terre

0