ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಶಾಲಾ ಮಕ್ಕಳಿಗೆ ಗಲೀಜು ನೀರು ಕುಡಿಯುವ ದುರ್ಗತಿ - ಶುದ್ಧ ಕುಡಿಯುವ ನೀರಿಗಾಗಿ ಒತ್ತಾಯ

ರಬಕವಿ-ಬನಹಟ್ಟಿ: ಸರಕಾರಿ ಶಾಲೆಯೊಂದರಲ್ಲಿರುವ ಕುಡಿಯುವ ನೀರಿನಲ್ಲಿ ಕಸ, ಕಡ್ಡಿ ಹುಳುಗಳು ಕಾಣಸಿಗುತ್ತಿರುವುದು ದುರ್ದೈವದ ಸಂಗತಿಯಾಗಿದೆ.

ಹೌದು, ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಕ್ರಾಸ್ ಬಳಿಯಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಹಾಗೂ ಬಳಕೆಗೆ ಹಳೆ ಟ್ಯಾಂಕರ್‌ದಿಂದ ಪೂರೈಸಲಾಗುತ್ತಿರುವ ನೀರಿನಲ್ಲಿ ಕಸ, ಕಡ್ಡಿ, ಹುಳುಗಳಿಂದ ಕೂಡಿದ ಗಲಿಜು ನೀರು ಕಂಡುಬಂದಿದೆ. ಇಂತಹ ನೀರನ್ನು ನಾವು ಹೇಗೆ ಕುಡಿಯುವುದು ಎಂದು ಮಕ್ಕಳೇ ಪ್ರಶ್ನೆ ಮಾಡಿದ್ದಾರೆ.

ಈ ಕುರಿತಂತೆ ಸ್ಥಳೀಯ ಆಡಳಿತ ಕೇಂದ್ರವಾದ ಗ್ರಾಮ ಪಂಚಾಯತ ಮತ್ತು ಶಿಕ್ಷಣ ಇಲಾಖೆ ಕುಂಭಕರ್ಣ ನಿದ್ರೆಗೆ ಜಾರಿದೆ ಎಂದೇ ಹೇಳಬಹುದು.

ರೈತಾಪಿ ಜನರೇ ಇರುವ ಇಲ್ಲಿನ ಎಸ್‌ಡಿಎಂಸಿ ಪದಾಧಿಕಾರಿಗಳು ಈ ಬಗ್ಗೆ ಅಧಿಕಾರಿಗಳನ್ನು ಸಾಕಷ್ಟು ಬಾರಿ ಕೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅನಾರೋಗ್ಯ ಭೀತಿಯಲ್ಲಿ ಮಕ್ಕಳು ಹಾಗೂ ಪಾಲಕರು ದಿನಗಳೆಯುವಂತಾಗಿದೆ.

ಇನ್ನಾದರೂ ಸಂಬಂಧಿಸಿದವರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರ ಮೂಲಕ ಪುಣ್ಯ ಕಟ್ಕೊಳ್ರಿ ಅನ್ನೋದೆ ಎಸ್‌ಡಿಎಂಸಿ ಅವರ ಕಳಕಳಿ.

Edited By : Manjunath H D
PublicNext

PublicNext

21/11/2024 08:13 am

Cinque Terre

14.37 K

Cinque Terre

0

ಸಂಬಂಧಿತ ಸುದ್ದಿ