ರಬಕವಿ-ಬನಹಟ್ಟಿ: ವರ್ಷದ ಹನ್ನೆರಡು ತಿಂಗಳು ಕೂಡ ನಿಸರ್ಗದ ಮಡಿಲಲ್ಲಿ ಕಾಯಕ ನಿರತರಾಗಿ ವಾಸಮಾಡುವ ಕುರಿಗಾಹಿಗಳು ದೀಪಾವಳಿ ಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ವಿಶೇಷವಾಗಿ ಪಾಡ್ಯ ದಿನವಾದ ಶನಿವಾರ ಆಚರಿಸಿದರು.
ದೀಪಾವಳಿ ಹಬ್ಬದ ಬಲಿಪಾಡ್ಯ ನಿಮಿತ್ತ ಕುರಿಗಾಹಿ ಜ್ಯೋತ್ಯೆಪ್ಪ ಭೀಮಪ್ಪ ಕಟ್ಟಿಮನಿ ಅವರು ಕುರಿಗಳಿಗೆ ಬಣ್ಣ ಹಚ್ಚಿ, ವಿಶೇಷ ರೀತಿಯಲ್ಲಿ ಅಲಂಕರಿಸಿ, ಕುರಿ ದಡ್ಡಿಯಲ್ಲಿ ಕಬ್ಬಿನಗರಿ ಕಟ್ಟಿ, ಕುಟುಂಬಸ್ಥರೊಂದಿಗೆ ಪೂಜೆ ನೆರವೇರಿಸಿ, ಸಂಭ್ರಮದಿಂದ ಆಚರಿಸಿದರು.
ಮಂಗಳಾಚರಣೆ ನಂತರ ಊಟ ಮಾಡಿ, ತಾಟಿನ ಸಪ್ಪಳದ ಮೂಲಕ ಕುರಿಗಳನ್ನು ಓಡಾಡಿಸುವ ವಿಶೇಷ ಕಾರ್ಯಕ್ಕೂ ಚಾಲನೆ ನೀಡಲಾಗುತ್ತದೆ. ಇಂತಹ ಹಬ್ಬದ ಆಚರಣೆಯು ದೀಪಾವಳಿಯ ವಿಶೇಷತೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
Kshetra Samachara
02/11/2024 02:49 pm