ಬಾಗಲಕೋಟೆ: ನಗರದ ಬಿ.ವ್ಹಿ.ವ್ಹಿ.ಸಂಘ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಿಪಿಟಿ ಪ್ರಸ್ತುತಿಕರಣದ ಮೂಲಕ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಎಂಬ ವಿಷಯದ ಮೇಲೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಎಲ್ಲ 52 ಬಿ.ಇಡಿ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿ.ಆರ್. ಶಿರೋಳ, ಶಿಕ್ಷಕರಾಗುವವರು ಈಗಿನ ಕಾಲದ ತಂತ್ರಜ್ಞಾನಕ್ಕೆ ಅನುಸಾರವಾಗಿ ಮಕ್ಕಳಿಗೆ ಬೋಧನೆಮಾಡಬೇಕು. "ವಿದ್ಯಾಧನಂ ಸರ್ವಧನಂ ಪ್ರಧಾನಂ" ಅಂದರೆ ಶಿಕ್ಷಕರು ತಮ್ಮಲ್ಲಿರು ಜ್ಞಾನವನ್ನು ಮಕ್ಕಳಿಗೆ ಧಾನವಾಗಿ ನೀಡುವುದು ಸರ್ವಧಾನಗಳಿಗಿಂತ ಶ್ರೇಷ್ಠವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ರಿಮತಿ ವ್ಹಿ.ಪಿ.ಹೊಸಕೇರಿ ವಹಿಸಿದ್ದರು.
ಐ.ಕ್ಯೂ.ಎ.ಸಿ ಸಂಯೋಜಕರಾದ ವಿ.ಡಿ.ಹೂಲಗೇರಿ , ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷ ಡಾ. ಆರ್.ಸಿ. ಯಾನಮಶೆಟ್ಟಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸ್ಪರ್ಧೆಗೆ ನಿರ್ಣಾಯಕರಾಗಿ ವಿ.ಆರ್. ಗೌಡರ , ವಿರೇಶ್ .ಬಳೆಗಾರ ಮತ್ತು ಆರ್.ಕೆ.ಕುಲಕರ್ಣಿ ಆಗಮಿಸಿದ್ದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಅಮರೇಶ ಎಮ್.ಜಿ , ದ್ವಿತೀಯ ಸ್ಥಾನ ಅಲ್ಲಾಬಾಕ್ಷ.ಇಮಾನದಾರ ಮತ್ತು ತೃತಿಯ ಸ್ಥಾನ ಅರುಣ ಎಸ್.ಡಿ ಸಮಾರೋಪ ದಲ್ಲಿ ನಗದು ಬಹುಮಾನ ಪಡೆದುಕೊಂಡರು. ಕಾರ್ಯಕ್ರಮವು ಸುಷ್ಮಿತಾ.ಕಿರಸೂರ ಹಾಗೂ ಸಂಗಡಿಗರಿಂದ ಪ್ರಾರ್ಥನೆಗೀತೆಯೊಂದಿಗೆ ಆರಂಭಿಸಲಾಯಿತು . ಸಹಪ್ರಾಧ್ಯಾಪಕರಾದ ಎನ್.ಜಿ. ಸರ್ವದೆ ಅವರು ಸ್ವಾಗತಿಸಿದರು. ಡಾ ಶ್ರಿಮತಿ ಆರ್.ಜಿ.ತೆಗ್ಗಿ ಅವರು ಪುಷ್ಪಾರ್ಪನೆ ನೆರವೇರಿಸಿದರು. ಡಾ ಶ್ರೀ ಎಸ್.ಎಸ್.ಭೂಮ್ಮಣ್ಣವರ ವಂದಿಸಿದರು, ಸೌಮ್ಯಾ.ನಾಯ್ಕರ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅವರು ಉಪಸ್ಥಿತರಿದ್ದರು.
Kshetra Samachara
01/10/2022 03:03 pm