ಬಾಗಲಕೋಟೆ: ಮೈಸೂರು ದಸರಾ ಉತ್ಸವದಲ್ಲಿ ಬಾಗಲಕೋಟೆ ಜಿಲ್ಲೆಯ ಇತಿಹಾಸ ಪ್ರಸಿದ್ದ ಪ್ರವಾಸಿ ತಾಣ ಐಹೊಳೆ, ಇಳಕಲ್ ಸೀರೆ ಮತ್ತು ಮುಧೋಳ ಶ್ವಾನದ ಮಹತ್ವ ಸಾರುವ ಟ್ಯಾಬ್ಲೋ ಗಮನ ಸೆಳೆದವು.
ಅತ್ಯಂತ ಸುಂದರವಾಗಿ ರೂಪಗೊಂಡಿದ್ದ ಟ್ಯಾಬ್ಲೋ ಸಾರ್ವಜನಿಕರನ್ನು ಆಕರ್ಷಿಸುವಲ್ಲಿ ಯಶಸ್ವಿ ಆದವು. ಟ್ಯಾಬ್ಲೋ ಮುಂಭಾಗದಲ್ಲಿ ಮುಧೋಳ ತಳಿಯ ಶ್ವಾನ, ಮಧ್ಯೆ ಪ್ರವಾಸಿ ತಾಣ ಐಹೊಳೆಯ ದುರ್ಗಾದೇವಿ ದೇವಸ್ಥಾನ ಮತ್ತು ಪಕ್ಕದಲ್ಲಿ ಇಳಕಲ್ ಸೀರೆ ಜಿಲ್ಲೆಯ ಐತಿಹಾಸಿಕ ಮಹತ್ವ ಸಾರಿ ಹೇಳುತ್ತಿದ್ದವು. ಒಟ್ಟಾರೆ ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿನ ಸ್ತಬ್ದಚಿತ್ರ ಮೆರವಣಿಗೆಯಲ್ಲಿ ಮಹತ್ವದ ಸ್ಥಾನ ಪಡೆದದ್ದು ಜಿಲ್ಲೆಯ ಮಹತ್ವ ಹೆಚ್ಚಿಸಿದವು.
Kshetra Samachara
05/10/2022 08:29 pm