ಬಾಗಲಕೋಟ: ಪೊಲೀಸ್ ಅಧಿಕಾರಿಗಳು ಪೇದೆಗಳನ್ನು ತಮ್ಮ ಮನೆಗೆಲಸಕ್ಕೆ ಬಳಸಿಕೊಳ್ಳುವುದು ಸಾಮಾನ್ಯ. ಈಗ ಜೇಲು ಸುಪರಿಂಟೆಂಡೆಂಟ್ ಕೈದಿಗಳನ್ನೇ ತನ್ನ ಮನೆ ಚಾಕರಿಗೆ ಬಳಸಿಕೊಂಡಿದ್ದು ಬೆಳಕಿಗೆ ಬಂದಿದೆ.
ವಿಚಾರಣಾಧೀನ ಕೈದಿಗಳನ್ನು ಹೊರಗೆ ಬಿಡುವಂತಿಲ್ಲ. ಆದರೆ ಜಿಲ್ಲಾಕಾರಾಗೃಹ ಅಧೀಕ್ಷಕ ದತ್ತಾತ್ರಿ ಮೇದಾ , ಕೈದಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಕೆಲಸ ಮಾಡಿಸಿಕೊಂಡು
ಕಾನೂನು ಉಲ್ಲಂಘನೆ ಮಾಡಿದ್ದಾರೆ.
ಮನೆ ಕೆಲಸ ಮಾಡಿ ಕೈದಿಗಳು ಹೊರಬರುತ್ತಿರುವ ವಿಡಿಯೊ ಲಭ್ಯವಾಗಿದೆ. ಬಾಗಲಕೋಟೆಯ ಕರ್ನಾಟಕ ಸಮಿತಿ ಪಕ್ಷದ ಕಾರ್ಯಕರ್ತರು ವಿಡಿಯೋ ಸೆರೆಹಿಡಿದಿದ್ದಾರೆ. ನಾಲ್ಕರಿಂದ ಐದು ಜನ ಕೈದಿಗಳನ್ನು ಮನೆ ಕೆಲಸಕ್ಕೆ ಬಳಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಇದು ತಿಳಿಯುತ್ತಲೇ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದಾಗ, ಹೆದರಿದ ಅಧೀಕ್ಷಕ, ಪ್ಲೀಸ್ ವಿಷಯ ದೊಡ್ಡದು ಮಾಡಬೇಡಿ. ಇವರು ಯಾವಾಗಲೂ ಬರೋ ದಿಲ್ಲ,
ಯಾವಾಗಲೋ ಒಮ್ಮೆ ಕರಕೊಂಡ ಬಂದಿರ್ತಿನಿ ಅಷ್ಟೇ. ಅವರನ್ನೆಲ್ಲ ಕಳಿಸಿದ್ದೀನಿ.. ಸುಮ್ನೆ ಬಿಟ್ಟು ಬಿಟ್ಟು ಬಿಡಿ ಎಂದು ಮಾಧ್ಯಮದ ಮುಂದೆ ಗೋಗರೆದಿದ್ದಾರೆ.
ಮನೆಗೆಲಸಕ್ಕೆ ಕರೆದುಕೊಂಡು ಬಂದಾಗ ಅಕಸ್ಮಾತ ಕೈದಿ ಫರಾರಿಯಾದರೆ ಯಾರು ಹೊಣೆ? ಇದಕ್ಕೆ ಸಂಬಂಧಪಟ್ಟ ಸಚಿವರೆ ಉತ್ತರಿಸಬೇಕು.
PublicNext
18/09/2022 03:38 pm