ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಲಕುರ್ಕಿ ರೈತರ ಭೂಸ್ವಾಧೀನ ಕೈಬಿಡಲು ನಂಜಯ್ಯನಮಠ ಆಗ್ರಹ

ಬಾಗಲಕೋಟೆ: ಕೈಗಾರಿಕೆ ಪ್ರದೇಶಕ್ಕಾಗಿ ಕೆಐಎಡಿಬಿ ತಮ್ಮ ಜಮೀನು ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಹಲಕುರ್ಕಿ ಗ್ರಾಮದ ರೈತರು ನಡೆಸಿರುವ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಜಿ.ನಂಜಯ್ಯನಮಠ ಬೆಂಬಲ ವ್ಯಕ್ತಪಡಿಸಿದರು. ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಸದ್ಯೋಭ ವಿಷ್ಯತ್ತಿನಲ್ಲಿ ಹಲಕುರ್ಕಿ ಗ್ರಾಮದ 2,200ಎಕರೆ ಜಮೀನು ಹೆರಕಲ್ ಏತ ನೀರಾವರಿ ಯೋಜನೆ ಮತ್ತು ಕೆರೂರ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯ ಹೊಂದಲಿದೆ. ಈ ಜಮೀನುಗಳು ನೀರಾವರಿಗೆ ಸೂಕ್ತ ಆಗಿವೆ ಎಂದರು.

ಈ ಗ್ರಾಮದಲ್ಲಿ ಬಹುತೇಕ ರೈತರು ಎಸ್ ಸಿ -ಎಸ್ ಟಿ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಈ ಜಮೀನು ಅವರಿಗೆ ಜೀವನಾಧಾರ. ಈಗ ಕೈಗಾರಿಕೆ ಸ್ಥಾಪನೆ ಉದ್ದೇಶಕ್ಕೆ ಈ ಜಮೀನು ಕಸಿದುಕೊಂಡರೆ ಆ ರೈತರು ನಿರ್ಗತಿಕರಾಗುತ್ತಾರೆ. ನೂರಾರು ರೈತರ ತುತ್ತಿನ ಚೀಲ ಬರಿದು ಮಾಡಿ ಯಾರೋ ಬೆರಳೆಣಿಕೆಯ ಸಂಖ್ಯೆಯ ಉದ್ಯಮಿಗಳಿಗೆ ಲಾಭ ಮಾಡಿಕೊಡುವುದು ಸರಿಯಲ್ಲ ಎಂದರು. ಕೈಗಾರಿಕೆ ಸಚಿವ ನಿರಾಣಿ ಅವರು ಇಲ್ಲಿನ ರೈತರು ಭಾವನೆಗಳನ್ನು ಅರ್ಥ ಮಾಡಿಕೊಂಡು ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಸಲಹೆ ನೀಡಿದರು.

Edited By : Nirmala Aralikatti
Kshetra Samachara

Kshetra Samachara

25/09/2022 06:00 pm

Cinque Terre

4.16 K

Cinque Terre

0