ಬಾಗಲಕೋಟೆ: ನಗರದ ಹೊರ ವಲಯದಲ್ಲಿ ಬೈಕ್ ಮತ್ತು ಕ್ಯಾಂಟರ್ ಟವರಸ್ ನಡುವೆ ಡಿಕ್ಕಿ ಸಂಭವಿಸಿ ಮಾಜಿ ಸಚಿವ ಎಸ್ . ಕೆ.ಬೆಳ್ಳುಬ್ಬಿ ಅವರ ಸಹೋದರನ ಮಗ ಸೇರಿದಂತೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ಬಳಿಯ ಯಡಹಳ್ಳಿ ಕ್ರಾಸ್ ಸಮೀಪ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಕೋಲ್ದಾರದ ಸಚಿನ್ ಮಲ್ಲಿಕಾರ್ಜುನ ಬೆಳ್ಳುಬ್ಬಿ ( 28 ) ಹಾಗೂ ಕೋಲ್ದಾರ ತಾಲೂಕಿನ ಕುಬಕಡ್ಡಿ ಗ್ರಾಮದ ಪರಶುರಾಮ ಸಂಗಪ್ಪ ತೆಲಗಿ ( 26 ) ರಸ್ತೆ ಅಪಘಾತದಲ್ಲಿ ಮೃತಪಟ್ಟವರು . ಇಬ್ಬರೂ ದೇವಿ ದರ್ಶನ ಪಡೆದು ಯಲ್ಲಮ್ಮನ ಗುಡ್ಡದಿಂದ ವಾಪಸ್ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಬೀಳಗಿ ಕಡೆಯಿಂದ ಕಲಾದಗಿ ಕಡೆಗೆ ತೆರಳುತ್ತಿದ್ದ ಕ್ಯಾಂಟರ್ ಟವರಸ್ ನಡುವೆ ರಸ್ತೆ ಅಪಘಾತ ಡಿಕ್ಕಿ ಸಂಭವಿಸಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಸಿಪಿಐ ಬಿ.ಎಂ. ಸೂರಿ ಹಾಗೂ ಕಲಾದಗಿ ಪೊಲೀಸ್ ಠಾಣೆ ಪಿಎಸ್ ಐ ಆರ್ . ಎಂ.ಸಂಕನಾಳ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Kshetra Samachara
06/10/2022 07:50 am