ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 15.9.2022

ಮೇಷ: ಪ್ರಯತ್ನದಿಂದ ಫಲ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಬಂಧುಗಳಿಂದ ವಿರೋಧ ಬರಬಹುದು. ಋಣ ವಿಮೋಚನೆ.

ವೃಷಭ: ಅಧಿಕ ವರಮಾನದಿಂದಾಗಿ ಮಾನಸಿಕ ನೆಮ್ಮದಿ. ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಮಕ್ಕಳಿಂದ ಶುಭ ಸುದ್ದಿ ಬರಲಿದೆ.

ಮಿಥುನ: ಪ್ರತಿಭೆಗೆ ಸೂಕ್ತ ಮನ್ನಣೆ ದೊರೆತು ಸಮಾಜದಲ್ಲಿ ಗೌರವ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ಉಳಿತಾಯ ಮಾಡಿ.

ಕಟಕ: ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರಬಹುದು. ತಾಳ್ಮೆಯಿಂದ ಇರಿ.

ಸಿಂಹ: ಅನಗತ್ಯ ವಿಷಯಗಳಿಂದ ದೂರವಿರಿ. ಊಟಕ್ಕೂ ಸಮಯ ಸಿಗದೇ ಹೋಗಬಹುದು. ಈ ದಿನ ಮೌನವಾಗಿರುವುದೇ ಉತ್ತಮ.

ಕನ್ಯಾ: ಆಸ್ತಿ ಲಭಿಸುವ ಸಾಧ್ಯತೆ ಜಾಸ್ತಿ ಇದೆ. ಒತ್ತಡದಿಂದ ಹಗುರಾಗಿ ಮನಃಶಾಂತಿ ದೊರೆಯುವುದು. ಆದಾಯ ಮತ್ತು ವೆಚ್ಚ ಸಮ.

ತುಲಾ: ಮಿತ್ರರ ಸಹಾಯ ದೊರೆಯಲಿದೆ. ವ್ಯವಹಾರಗಳಲ್ಲಿ ಅಲ್ಪ ಪ್ರಗತಿ ಕಾಣಿಸುವುದು. ಆದಾಯಕ್ಕಿಂತ ಖರ್ಚು ಜಾಸ್ತಿಯಾಗಲಿದೆ.

ವೃಶ್ಚಿಕ: ಪಾಪ ಕಾರ್ಯ ಮಾಡುವ ಮನಸ್ಸಾದರೂ ಮುಂದುವರಿಯಬೇಡಿ. ರಿಯಲ್ ಎಸ್ಟೇಟ್ನವರಿಗೆ ಪ್ರಗತಿ. ಶತ್ರುಭಯ. ಅಪನಿಂದನೆ.

ಧನುಸ್ಸು: ಯತ್ನ ಕಾರ್ಯನುಕೂಲ. ವ್ಯಾಪಾರದಲ್ಲಿ ಅಧಿಕ ಲಾಭ ನಿಮ್ಮದಾಗಲಿದೆ. ಆಲಸ್ಯ ಭಾವದಿಂದ ಬೇಗ ಹೊರಬನ್ನಿ. ದ್ರವ್ಯಲಾಭ.

ಮಕರ: ಮನೋವ್ಯಥೆ ತೀವ್ರವಾಗಿ ಕಾಡಬಹುದು. ಧ್ಯಾನ ಮಾಡುವುದರಿಂದ ಕ್ಷೇಮ. ಸಾಲದಿಂದ ಮುಕ್ತಿ. ದಾಂಪತ್ಯದಲ್ಲಿ ಅಸಮಾಧಾನ.

ಕುಂಭ: ವಿದ್ಯಾರ್ಥಿಗಳಲ್ಲಿ ಗೊಂದಲ. ಚೋರಾಗ್ನಿ ಭೀತಿ. ವಿಪರೀತ ವ್ಯಸನ ಒಳ್ಳೆಯದಲ್ಲ. ಅತಿಯಾದ ನಿದ್ರೆ, ದುಷ್ಟ ಜನರಿಂದ ಕಿರುಕುಳ.

ಮೀನ: ಗುರು ಹಿರಿಯರಲ್ಲಿ ಭಕ್ತಿಯಿಡಿ. ಕೋಪ ನಿಯಂತ್ರಿಸಿ ಕೊಳ್ಳಿ. ನೌಕರಿಯಲ್ಲಿ ಬಡ್ತಿ. ಶೀತ ಸಂಬಂಧೀ ತೊಂದರೆ. ಆಕಸ್ಮಿಕ ಧನಲಾಭ.

Edited By : Nirmala Aralikatti
PublicNext

PublicNext

15/09/2022 07:16 am

Cinque Terre

117.49 K

Cinque Terre

1