ಮೇಷ: ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಳ್ಳಿ. ಕುಟುಂಬ ಸ್ಥರೊಂದಿಗೆ ಸಮಯ ಕಳೆಯಿರಿ. ಸಾಮಾಜಿಕ ಕಾರ್ಯದಲ್ಲಿ ಶುಭವಾಗಲಿದೆ.
ವೃಷಭ: ಆತ್ಮವಿಶ್ವಾಸ ಅಧಿಕವಾಗಿರುತ್ತದೆ. ಉತ್ಪಾದನಾ ಕ್ಷೇತ್ರದವರಿಗೆ ಕಾರ್ಯದೊತ್ತಡ. ಹೂಡಿಕೆಯಲ್ಲಿ ಯಶಸ್ಸು ನಿಮ್ಮ ಕಡೆಗಿದೆ.
ಮಿಥುನ: ಹಿರಿಯರ ಸಲಹೆಗಳನ್ನು ಗೌರವದಿಂದ ಸ್ವೀಕರಿಸಿ. ಸಹೋದ್ಯೋಗಿಗಳಿಂದ ಸಹಕಾರ ದೊರೆಯುವುದು. ಕ್ರೀಡಾಪಟುಗಳಿಗೆ ಶುಭ.
ಕಟಕ: ದಾಂಪತ್ಯದಲ್ಲಿ ನಿರ್ಲಕ್ಷ್ಯ ಬೇಡ. ಸಾಮರಸ್ಯದ ಕಡೆ ಕಾಳಜಿ ಇರಲಿ. ರಾಜಕೀಯದಲ್ಲಿ ಪ್ರಗತಿ. ಅಮೂಲ್ಯ ವಸ್ತುಗಳ ಖರೀದಿ.
ಸಿಂಹ: ಆರೋಗ್ಯದತ್ತ ಕಾಳಜಿಯಿರಲಿ. ಕೈಗಾರಿಕಾ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆ. ಉಡುಪು ವಿನ್ಯಾಸಕರಿಗೆ ಲಾಭವಾಗುವುದು.
ಕನ್ಯಾ: ಕೆಲಸದ ಹೊರೆ ಜಾಸ್ತಿಯಾಗಲಿದೆ. ಸಹಜವಾಗಿ ಒತ್ತಡ. ಸಾಲಗಳಿಂದ ಮುಕ್ತಿ ದೊರೆತು ನಿರಾಳ ಭಾವ. ಜವಾಬ್ದಾರಿಗಳು ಹೆಚ್ಚುತ್ತವೆ.
ತುಲಾ: ಪ್ರಯಾಣಕ್ಕಾಗಿ ಧನಹಾನಿಯಾಗುವ ಸಾಧ್ಯತೆ. ರಿಯಲ್ ಎಸ್ಟೇಟ್ನಲ್ಲಿ ಶುಭ ಸಮಾಚಾರ. ಕಮಿಷನ್ ಕ್ಷೇತ್ರದವರಿಗೆ ಲಾಭ.
ವೃಶ್ಚಿಕ: ಚಿತ್ರೀಕರಣ ಕ್ಷೇತ್ರದಲ್ಲಿ ಇರುವವರಿಗೆ ಪ್ರಗತಿ ಇದೆ. ಸ್ನೇಹ ಸಂಬಂಧ ವೃದ್ಧಿಯಾಗಲಿದೆ. ಮನೆಯ ಪರಿಸ್ಥಿತಿ ಸುಧಾರಿಸುವುದು.
ಧನುಸ್ಸು: ಉತ್ಸಾಹವನ್ನು ನಿಯಂತ್ರಣದಲ್ಲಿಡಿ. ಸರ್ಕಾರಿ ವಲಯದಲ್ಲಿ ಇರುವವರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಕೃಷಿಕರಿಗೆ ಶುಭ.
ಮಕರ: ಆರ್ಥಿಕತೆಯಲ್ಲಿ ಸುಧಾರಣೆ. ದಿಟ್ಟತನದ ನಿರ್ಧಾರದಿಂದ ಶುಭ. ಯಂತ್ರೋಪಕರಣಗಳ ವ್ಯಾಪಾರಸ್ಥರಿಗೆ ಆದಾಯ.
ಕುಂಭ: ಹೂಡಿಕೆಗಳು ಲಾಭದಾಯಕ. ಉದ್ವೇಗವನ್ನು ನಿಯಂತ್ರಿಸಲು ಯೋಗ, ಧ್ಯಾನದ ಮೊರೆ ಹೋಗಿ. ತೈಲ ಮಾರಾಟದಲ್ಲಿ ಶುಭ.
ಮೀನ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಪ್ರಗತಿ ಕಾಣಲಿದೆ. ನೆರೆಹೊರೆಯವರಿಂದ ಸಹಾಯ. ಹೊಸ ಒಪ್ಪಂದಗಳಿಂದ ಲಾಭವಾಗುವುದು.
PublicNext
12/09/2022 07:09 am