ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಮಂಗಳವಾರ, 12 ಜುಲೈ 2022

ಮೇಷ ರಾಶಿ: ಮೇಷ ರಾಶಿಯ ಜನರು ಯಾವುದೇ ಕೆಲಸವನ್ನು ಮಾಡುವ ಮುನ್ನ ಯೋಜನೆಯನ್ನು ರೂಪಿಸಿ, ನಂತರ ಕಾರ್ಯಪ್ರವೃತ್ತರಾಗಿ. ಇದರಿಂದ ಸಮಯ ಉಳಿಯುವುದರ ಜೊತೆಗೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ. ಕಾಲಕ್ಕೆ ತಕ್ಕಂತೆ ಬದಲಾದಾಗ ಮಾತ್ರ ನಾವೂ ಮುಂದುವರೆಯಬಹುದು. ಕೆಲಸದಲ್ಲಿ ಉತ್ತಮ ಫಲಿತಾಂಶಕ್ಕಾಗಿ ತಂತ್ರಜ್ಞಾನವನ್ನು ಬಳಸಿ.

ವೃಷಭ ರಾಶಿ: ಒಗ್ಗಟ್ಟಿನಲ್ಲಿ ಬಲವಿದೆ. ನೀವು ಯಾವುದೇ ಕೆಲಸವನ್ನು ಒಬ್ಬಂಟಿಯಾಗಿ ಮಾಡುವ ಬದಲು ನಿಮ್ಮ ತಂಡದ ಸಹಾಯ ತಗೆದುಕೊಳ್ಳಿ. ಯಾವುದೇ ಹೊಸ ವ್ಯಾಪಾರ ಆರಂಭಿಸುವ ಮೊದಲು ಅದರ ಆಳ-ಅಗಲದ ಬಗ್ಗೆ ಸಂಪೂರ್ಣವಾಗಿ ತಿಳಿದು ನಂತರ ಕೈ ಹಾಕಿ. ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಸರ್ಕಾರಿ ಕೆಲಸಗಳಲ್ಲಿ ಕೊಂಚ ಕಿರಿ-ಕಿರಿ ಆಗುವ ಸಾಧ್ಯತೆ ಇದೆ. ನೀವು ಸರ್ಕಾರಿ ನೌಕರರಾಗಿದ್ದರೆ ಯಾವುದೇ ತಪ್ಪಾಗದಂತೆ ನಿಗಾವಹಿಸಿ. ಇಲ್ಲವೇ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಚ್ಚರ. ಈ ಋತುವಿನಲ್ಲಿ ಆಹಾರ ಮತ್ತು ಪಾನೀಯಗಳಲ್ಲಿ ತಣ್ಣನೆಯ ವಸ್ತುಗಳನ್ನು ತಪ್ಪಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

ಕರ್ಕಾಟಕ ರಾಶಿ: ಈ ರಾಶಿಯ ಜನರು ಕಡ್ಡಿಯನ್ನು ಗುಡ್ಡ ಮಾಡಲು ಹೋಗಬೇಡಿ. ಇದರಿಂದ ನಿಮಗೆ ತೊಂದರೆ. ಪ್ರೀತಿಯಿಂದ ಪರಿಸ್ಥಿತಿಯನ್ನು ನಿಯಂತ್ರಿಸಿ. ವ್ಯಾಪಾರ-ವ್ಯವಹಾರದಲ್ಲಿ ಯಾವುದೇ ರೀತಿಯ ನಷ್ಟ ಅನುಭವಿಸುತ್ತಿದ್ದರೆ ಎದೆಗುಂದಬೇಡಿ. ವ್ಯಾಪಾರ ಎಂದ ಮೇಲೆ ಲಾಭ-ನಷ್ಟ ಇದ್ದದ್ದೇ ಎಂಬುದನ್ನು ನೆನಪಿನಲ್ಲಿಡಿ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕಚೇರಿಯಲ್ಲಿ ಹಿರಿಯರ ಮಾರ್ಗದರ್ಶನ ದೊರೆಯುತ್ತದೆ. ಮಾತ್ರವಲ್ಲ, ಯಾವುದೇ ರೀತಿಯ ಸಮಸ್ಯೆ ಇದ್ದರೂ ಅವು ಸುಲಭವಾಗಿ ಬಗೆಹರಿಯಲಿವೆ. ನೀವು ನಿಮ್ಮ ಖರ್ಚಿನ ಬಗ್ಗೆ ವಿಶೇಷ ಗಮನ ಹರಿಸಿ. ಯೋಚಿಸಿ ಖರ್ಚು ಮಾಡುವುದರಿಂದ ಹಣ ಉಳಿಸಬಹುದು.

ಕನ್ಯಾ ರಾಶಿ: ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಇಷ್ಟು ದಿನಗಳ ತೊಂದರೆಗಳು ಕೊನೆಗೊಳ್ಳುವ ಸಮಯ ಬಂದಿದೆ. ಯಾವುದೇ ಕೆಲಸದಲ್ಲಿ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ, ಬದಲಿಗೆ ನೇರ ದಾರಿಯಲ್ಲಿ ಕೆಲಸ ಮಾಡಿ ಇಂದಲ್ಲಾ ನಾಳೆ ಯಶಸ್ಸು ಸಿಕ್ಕೇ ಸಿಗುತ್ತದೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುತ್ತಿದ್ದರೆ ಅದರಲ್ಲಿ ಉತ್ಸಾಹದಿಂದ ಭಾಗವಹಿಸಿ.

ತುಲಾ ರಾಶಿ: ತುಲಾ ರಾಶಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಸಿದ್ಧತೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು, ಉತ್ತಮ ತಯಾರಿ ಇದ್ದರೆ ಮಾತ್ರ ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ. ಕೌಟುಂಬಿಕ ವಾತಾವರಣವನ್ನು ಹರ್ಷಚಿತ್ತದಿಂದ ಇರಿಸಲು, ಎಲ್ಲಾ ಸದಸ್ಯರಲ್ಲಿ ಒಮ್ಮತವನ್ನು ಹೊಂದಿರುವುದು ಬಹಳ ಮುಖ್ಯ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಇಂದು ವಿದೇಶಿ ಕಂಪನಿಗಳಿಂದ ಉದ್ಯೋಗಕ್ಕೆ ಆಫರ್ ಬರಬಹುದು. ಈ ಸಂದರ್ಭದಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳುವ ಬದಲಿಗೆ ಯೋಚಿಸಿ ನಿರ್ಧಾರ ಕೈಗೊಳ್ಳಿ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತಿದೆ. ಅಂತೆಯೇ ಯಾರೊಂದಿಗಾದರೂ ಮನಸ್ಥಾಪವಿದ್ದರೆ ಅದನ್ನು ಮಾತಿನಿಂದ ಬಗೆಹರಿಸಿಕೊಳ್ಳಿ. ಯಾವುದೇ ಭಿನಾಭಿಪ್ರಾಯವು ಹೆಚ್ಚಾಗಲು ಬಿಡಬೇಡಿ.

ಧನು ರಾಶಿ: ಧನು ರಾಶಿಯ ಮಾರ್ಕೆಟಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಟಾರ್ಗೆಟ್ ಪೂರ್ಣಗೊಳಿಸಲು ಕಷ್ಟವಾಗಬಹುದು. ದೂರಸಂಪರ್ಕ ವ್ಯವಹಾರವನ್ನು ಮಾಡುವ ಕೆಲವರು ಅಸಮಾಧಾನಗೊಂಡಿರಬಹುದು, ಆದರೆ ನಿರಾಶೆಗೊಳ್ಳಬೇಡಿ.

ಮಕರ ರಾಶಿ: ಈ ರಾಶಿಯವರು ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು. ನಿಮ್ಮ ನ್ಯೂನತೆಗಳನ್ನು ಕಂಡುಹಿಡಿಯಿರಿ ಮತ್ತು ಅವುಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ಕುಟುಂಬದಲ್ಲಿ ನಿಮ್ಮ ಹಿರಿಯರೆಲ್ಲರನ್ನು ಗೌರವಿಸುವುದು ಅವಶ್ಯಕ, ಇದರಿಂದ ನೀವು ಹಿರಿಯರ ಆಶೀರ್ವಾದವನ್ನು ಪಡೆಯುತ್ತೀರಿ.

ಕುಂಭ ರಾಶಿ: ಕುಂಭ ರಾಶಿಯವರಿಗೆ ಅಧಿಕೃತ ಕೆಲಸದ ಹೊರೆ ಹೆಚ್ಚಾಗಿರುತ್ತದೆ, ಈ ಕಾರಣದಿಂದಾಗಿ ಅವರು ದೀರ್ಘಕಾಲ ಕುಳಿತುಕೊಳ್ಳಬೇಕಾಗುತ್ತದೆ. ಉದ್ಯಮಿಗಳು ಸಣ್ಣ ಹೂಡಿಕೆಗಳಿಂದ ಲಾಭ ಗಳಿಸಬಹುದು, ಅವರ ಆರ್ಥಿಕ ಪ್ರಗತಿಗೆ ಹೊಸ ಮಾರ್ಗಗಳು ಕಂಡುಬರುತ್ತವೆ.

ಮೀನ ರಾಶಿ: ಬಟ್ಟೆ ವ್ಯಾಪಾರಿಗಳು ಉತ್ತಮ ಲಾಭ ಗಳಿಸಲು ಸಾಧ್ಯವಾಗುತ್ತದೆ, ಬಟ್ಟೆ ವ್ಯಾಪಾರಿಗಳು ತಮ್ಮ ಗ್ರಾಹಕರಲ್ಲಿ ಪ್ರಚಾರವನ್ನು ಹರಡುತ್ತಲೇ ಇರುವುದು ನಿಮಗೆ ಲಾಭವಾದೀತು. ಯುವಕರು ತಮ್ಮ ಗುರಿಯತ್ತ ಪ್ರಾಮಾಣಿಕವಾಗಿರಬೇಕು ಮತ್ತು ಅದನ್ನು ಸಾಧಿಸಲು ಶ್ರಮಿಸಬೇಕು. ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಹುದು, ಇದರಲ್ಲಿ ಕುಟುಂಬ ಸದಸ್ಯರ ಅಭಿಪ್ರಾಯವನ್ನು ತೆಗೆದುಕೊಂಡರೆ ಅದು ಸರಿಯಾಗುತ್ತದೆ.

Edited By : Nagaraj Tulugeri
PublicNext

PublicNext

12/07/2022 08:29 am

Cinque Terre

17.12 K

Cinque Terre

0