ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 10.7.2022

ಮೇಷ: ಮಹಿಳಾ ಉದ್ಯೋಗಿಗಳಿಗೆ ಶುಭ ಸುದ್ದಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಅಪರಿಚಿತರಿಂದ ಮೋಸ ಸಾಧ್ಯತೆ. ಹುಷಾರು.

ವೃಷಭ: ಅನಿರೀಕ್ಷಿತ ತಿರುವು. ಆಸ್ತಿ ವಿವಾದವಾಗಿ ಸಹೋದರರ ಜತೆ ಘರ್ಷಣೆ. ಅವಿವಾಹಿತರಿಗೆ ಶುಭ ಸುದ್ದಿ. ಸಾಲಗಾರರ ಕಿರುಕುಳ.

ಮಿಥುನ: ಕೌಟುಂಬಿಕ ಕಿರಿಕಿರಿಯ ಸಾಧ್ಯತೆ. ಸಂಗಾತಿಯೊಡನೆ ವಾದ ವಿವಾದ ಸಲ್ಲ. ಮಕ್ಕಳ ಸಹಕಾರದಿಂದ ನೆಮ್ಮದಿ ಕಂಡುಕೊಳ್ಳುವಿರಿ.

ಕಟಕ: ವಾತ್ಸಲ್ಯ ತುಂಬಿದ ಮಾತಿನಿಂದಾಗಿ ಸಂಗಾತಿಯಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಿರಿ. ದೂರದ ಪ್ರಯಾಣದಿಂದಾಗಿ ಬೇಸರ ಸಾಧ್ಯತೆ.

ಸಿಂಹ: ಧಾರ್ವಿುಕ, ಸಾಮಾಜಿಕ ಚಿಂತನೆಗಳತ್ತ ಮನಸ್ಸನ್ನು ಹರಿಬಿಡುವಿರಿ. ಜೀವನದ ಅರ್ಥಕ್ಕೆ ಹುಡುಕಾಟ. ಅಧ್ಯಯನಶೀಲರಿಗೆ ಯಶ.

ಕನ್ಯಾ: ಬೇಸತ್ತ ನಿಮಗೆ ಹೊಸ ಜಗತ್ತಿನ ಅರಿವಿನಿಂದಾಗಿ ಮುದಗೊಳ್ಳುವ ಅವಕಾಶ. ಹೊಸ ಸಂಬಂಧ, ಗೆಳೆತನ ಕೂಡಿಬರುವ ಸಾಧ್ಯತೆ.

ತುಲಾ: ಬೇರೆಯವರ ಮನದಾಳದ ಮಾತುಗಳನ್ನು ಆಲಿಸುವ ಆತುರ. ಉತ್ತಮ ಅಭಿಪ್ರಾಯಗಳಿಂದಾಗಿ ಮನಸ್ಸಿಗೆ ಹಿತಾನುಭವ.

ವೃಶ್ಚಿಕ: ನಿರಾಸೆಯಿಂದ ಹೊರಬಂದು ಕಾರ್ಯಮಗ್ನರಾಗಿ ಯಶಸ್ಸು ಸಾಧಿಸಿ. ಮುಲಾಜಿಗೆ ಒಳಗಾಗದೇ ಪಕ್ಕಾ ವ್ಯವಹಾರಸ್ಥರಾಗಿ.

ಧನುಸ್ಸು: ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಾಧ್ಯತೆ. ನಿಮ್ಮಯೋಜನೆಗಳ ಬಗ್ಗೆ ಹಿತೈಷಿಗಳೆದುರು ಪ್ರಸ್ತಾಪಿಸಿ. ಯಶಸ್ಸನ್ನು ಕಾಣುವಿರಿ.

ಮಕರ: ನಿಮ್ಮ ಗುರಿಯನ್ನು ನಿರಾಯಾಸವಾಗಿ ತಲುಪುವಿರಿ. ಕಾರ್ಯತತ್ಪರತೆಯಿಂದ ಹಿಂಜರಿಯದಿರಿ. ಉನ್ನತಾಧಿಕಾರಿಗಳಿಂದ ಪ್ರಶಂಸೆ.

ಕುಂಭ: ಕುಟುಂಬದ ವಿಷಯಗಳಲ್ಲಿ ನಿಮ್ಮ ದೃಢ ನಿಲುವು ಅಮೂಲ್ಯವಾಗಿ ಪರಿಣಮಿಸುವುದು. ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ.

ಮೀನ: ನಿಮ್ಮ ಮಾತು ಮತ್ತು ಆಕರ್ಷಕ ವ್ಯಕ್ತಿತ್ವದಿಂದಾಗಿ ಇತರರನ್ನು ಸಂತೋಷ ಗೊಳಿಸುವಿರಿ ನಿಮ್ಮ ನಿರ್ಧಾರಕ್ಕೆ ಬಹುಜನರ ಪ್ರಶಂಸೆ.

Edited By : Nirmala Aralikatti
PublicNext

PublicNext

10/07/2022 07:15 am

Cinque Terre

64.77 K

Cinque Terre

0