ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 17.3.2022

ಮೇಷ: ವೈಜ್ಞಾನಿಕ ಸಂಶೋಧನೆಯಲ್ಲಿ ಇರುವವರಿಗೆ ಅನಿರೀಕ್ಷಿತ ಫಲಿತಾಂಶ. ಇಷ್ಟು ದಿನದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ವೃಷಭ: ಕಮಿಷನ್ ಏಜೆಂಟ್ ಗಳಿಗೆ ಅಧಿಕ ಆದಾಯ. ಮನೆಯಲ್ಲಿ ಹಿತಕರ ವಾತಾವರಣ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ.

ಮಿಥುನ: ಆರ್ಥಿಕ ಸಮಸ್ಯೆ. ಸಂಬಂಧಿಕರ ಸಹಾಯ ಕೇಳುವುದು ಅನಿವಾರ್ಯವಾಗುವುದು. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆ.

ಕಟಕ: ಹೊಸತನದತ್ತ ತುಡಿತ. ಅಂದುಕೊಂಡ ಯೋಜನೆ ಕಾರ್ಯರೂಪಕ್ಕೆ ಬರಲು ದೈವಬಲ ಬೇಕು. ಇಷ್ಟದೇವರನ್ನು ಬೇಡಿಕೊಳ್ಳಿ.

ಸಿಂಹ: ಹೊಸ ವಾಹನ ಖರೀದಿ ಅಗತ್ಯ. ನಿಮ್ಮ ಮಾನಸಿಕ ಶಕ್ತಿ ಬಲವಾಗಿದೆ. ಯೋಚನೆಗಳನ್ನು ಶೀಘ್ರ ಕಾರ್ಯರೂಪಕ್ಕೆ ಇಳಿಸುತ್ತೀರಿ.

ಕನ್ಯಾ: ಇತರರು ನಿಮ್ಮ ಸಮಯ ಯಾಚಿಸುತ್ತಿದ್ದಾರೆ. ಸ್ವಂತ ಕೆಲಸ ನಿಧಾನವಾಗಲಿದೆ. ವಿವಾದ, ರಾಜೀ ಪಂಚಾಯ್ತಿಗಳಿಂದ ದೂರವಿರಿ.

ತುಲಾ: ಅಪೇಕ್ಷಿಸಿದ ಸಹಕಾರವನ್ನು ಮೇಲಧಿಕಾರಿಗಳಿಂದ ಪಡೆಯುವಿರಿ. ಅದರಿಂದಾಗಿ ಹಳೆಯ ಯೋಜನೆಗಳಿಗೆ ಮರು ಜೀವ.

ವೃಶ್ಚಿಕ: ಉದ್ಯೋಗಕ್ಕೆ ಸಂಬಂಧಿಸಿ ಯಂತ್ರಗಳ ಹಾನಿ. ಆರೋಗ್ಯದ ವ್ಯತ್ಯಾಸಕ್ಕೆ ನಿದ್ರಾಭಂಗ ಮೂಲ. ಲೇವಾದೇವಿಯಲ್ಲಿ ನಷ್ಟ ಸಾಧ್ಯತೆ.

ಧನುಸ್ಸು: ತೀರ್ಮಾನ ಹೇಳುವ ಜವಾಬ್ದಾರಿ ಬೇಡ. ಆರಂಭಿಸಿದ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಿದರೂ ಪೂರ್ಣಗೊಳ್ಳಲಿವೆ.

ಮಕರ: ಆಸ್ತಿಗೆ ಸಂಬಂಧಿಸಿ ದಾಯಾದಿಗಳ ತಂಟೆ ನಿಧಾನವಾಗಿ ದೂರವಾಗಲಿವೆ. ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಿ ಅಭಿವೃದ್ಧಿಯಾಗಲಿದೆ.

ಕುಂಭ: ಕಷ್ಟಗಳನ್ನು ಎದುರಿಸುವ ಎದೆಗಾರಿಕೆಯನ್ನು ಹೊಂದಿರುವಿರಿ. ದುಃಖಗಳ ತೀವ್ರತೆಯು ದಿನದಿಂದ ದಿನಕ್ಕೆ ಕಡಿಮೆಯಾಗುವುದು.

ಮೀನ: ನಿಮ್ಮ ಚಟುವಟಿಕೆಯು ಸದವಕಾಶವನ್ನು ತಂದು ಕೊಡಲಿದೆ. ಭೂ ವ್ಯವಹಾರದಲ್ಲಿ ಲಾಭ. ಸಗಟು ವ್ಯಾಪಾರಿಗಳಿಗೆ ಧನ ನಷ್ಟ.

Edited By : Nirmala Aralikatti
PublicNext

PublicNext

17/03/2022 07:14 am

Cinque Terre

42.9 K

Cinque Terre

0