ಮೇಷ: ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ. ಕುಟುಂಬದಲ್ಲಿ ವಾದ-ವಿವಾದಗಳು ಹೆಚ್ಚಾಗಬಹುದು. ಸಹನೆ ಇರಲಿ.
ವೃಷಭ: ಕೌಟುಂಬಿಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳು ವಿರಿ. ನಿಮ್ಮ ವಿರೋಧಿಗಳು ಸಹ ಕಾರ್ಯಗಳಲ್ಲಿ ಬೆಂಬಲ ಸೂಚಿಸುವರು.
ಮಿಥುನ: ಹಿರಿಯರ ಸಕಾಲಿಕ ಸಲಹೆಗಳಿಂದ ನಷ್ಟ ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ. ಜಂಟಿ ವ್ಯವಹಾರ ಬೇಡ.
ಕಟಕ: ಪದೇಪದೆ ನಿಮ್ಮ ನಿರ್ಧಾರಗಳನ್ನು ಬದಲಿಸುವ ನಡವಳಿಕೆಯಿಂದಾಗಿ ಕುಟುಂಬದಲ್ಲಿ ಬೇಸರ. ಹೂವಿನ ವ್ಯಾಪಾರಿಗಳಿಗೆ ಲಾಭ.
ಸಿಂಹ: ಆತುರದ ನಿರ್ಧಾರ ಬೇಡ. ಮಹಿಳೆಯರಿಗೆ ಕುಟುಂಬ ವ್ಯವಹಾರಗಳಲ್ಲಿ ತೃಪ್ತಿ. ವೃತ್ತಿಯಲ್ಲಿನ ಸಮಸ್ಯೆಗೆ ಶ್ರೀದಲ್ಲಿ ಪರಿಹಾರ.
ಕನ್ಯಾ: ಸಾಲ ಮರುಪಾವತಿಸಿ ಗೌರವ ಉಳಿಸಿಕೊಳ್ಳುವಿರಿ. ವಸ ವ್ಯಾಪಾರಿಗಳಿಗೆ ಆದಾಯ ಜಾಸ್ತಿ. ಆಸ್ತಿಯ ವಿಷಯದಲ್ಲಿ ಮನಃಸ್ತಾಪ.
ತುಲಾ: ಕೃಷಿಕರಿಗೆ ಬೆಲೆ ಕುಸಿತದ ಆತಂಕ. ಸ್ವಯಂ ಉದ್ಯೋಗ ಮಾಡುವವರಿಗೆ ಅಧಿಕ ಲಾಭ. ಆದಾಯದಲ್ಲಿ ಗಣನೀಯ ಹೆಚ್ಚಳ.
ವೃಶ್ಚಿಕ: ಬಾಹ್ಯಾಕಾಶ ಸಂಸ್ಥೆಯ ಉದ್ಯೋಗಿಗಳಿಗೆ ಮೇಲ್ದರ್ಜೆಯ ಹುದ್ದೆ ದೊರೆಯುವ ಸಾಧ್ಯತೆ. ಸರ್ಕಾರಿ ಕೆಲಸಗಳಲ್ಲಿ ಮಂದಗತಿ.
ಧನು: ಕೆಲವೊಂದು ವಿಷಯಗಳಲ್ಲಿ ಭಾವೋದ್ವೇಗಕ್ಕೆ ಒಳಗಾಗಬಹುದು. ಸಮಾಧಾನ ಚಿತ್ತದಿಂದ ವ್ಯವಹರಿಸಿ. ಕೃಷಿಕರಿಗೆ ಆದಾಯ.
ಮಕರ: ಆಂತರಿಕ ಗೊಂದಲ ನಿವಾರಣೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.
ಕುಂಭ: ಬಾಡಿಗೆಯಿಂದ ಹೆಚ್ಚಿನ ಆದಾಯ. ಪ್ರೇಮದಲ್ಲಿ ಬಿದ್ದವರಿಗೆ ಹಿನ್ನಡೆ. ವಿದೇಶಿ ವ್ಯವಹಾರ ಮಾಡುವವರಿಗೆ ಮುನ್ನಡೆ ಇರುತ್ತದೆ.
ಮೀನ: ಬಯಸಿದ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ. ಅತಿಯಾದ ಆತ್ಮೀಯತೆಯನ್ನು ತೋರಿಸುವವರ ಬಗ್ಗೆ ಎಚ್ಚರದಿಂದಿರಿ.
PublicNext
13/02/2022 07:12 am