ಮೇಷ: ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯ ವೃದ್ಧಿ. ನಿಮ್ಮ ಕಾರ್ಯಕ್ಕೆ ಹಿರಿಯರ ಹಾರೈಕೆ.
ವೃಷಭ: ಸಾಂಸಾರಿಕ ಗೊಂದಲಗಳನ್ನು ತಾಳ್ಮೆಯಿಂದ ಬಗೆಹರಿಸಿ. ಋಣಾತ್ಮಕ ಚಿಂತನೆಯಿಂದ ಹೊರಬನ್ನಿ. ಹಳೆಯ ಸ್ನೇಹಿತನ ಭೇಟಿ.
ಮಿಥುನ: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಬಹುದು, ಎಚ್ಚರಿಕೆಯಿಂದಿರಿ. ವೃತ್ತಿರಂಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಉಂಟಾದೀತು.
ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಸಾಲಗಾರರಿಂದ ತೊಂದರೆ ಅನುಭವಿಸಬೇಕಾದೀತು.
ಸಿಂಹ: ಅನವಶ್ಯಕ ತಿರುಗಾಟ. ಸ್ವಂತಗ್ರಾಮಕ್ಕೆ ಭೇಟಿ. ನಟರಿಗೆ ವಿಶೇಷ ಲಾಭ. ಭೂ ವಿವಾದದ ತೀರ್ಪು ಬರುವ ಸಂಭವ.
ಕನ್ಯಾ: ಅನಿರೀಕ್ಷಿತವಾಗಿ ಧನಲಾಭ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ನಿಮ್ಮ ಗುಣಗಾನ. ಸಹೋದ್ಯೋಗಿಗಳಿಂದ ಕಿರಿಕಿರಿ.
ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರಗೊಳ್ಳಲಿದೆ. ಆರೋಗ್ಯದಲ್ಲಿ ಸುಧಾರಣೆ.
ವೃಶ್ಚಿಕ: ಮನೆ ಬದಲಾವಣೆಯ ಸಾಧ್ಯತೆ. ಭೂಮಿ ವಿವಾದದ ತೀರ್ಪ. ಕುಟುಂಬದೊಂದಿಗೆ ಸಮಾಲೋಚನೆ. ದಿನಾಂತ್ಯದಲ್ಲಿ ಶುಭ.
ಧನುಸ್ಸು: ಕೆಲವೊಂದು ಘಟನೆಗಳು ನಿಮ್ಮ ಅಸಹನೆಗೆ ಕಾರಣ ಆಗಬಹುದು. ಸಾರ್ವಜನಿಕವಾಗಿ ಅವಮಾನ. ಸ್ನೇಹಿತನಿಂದ ಸಮಾಧಾನ.
ಮಕರ: ವಿದ್ಯಾರ್ಥಿಗಳಿಗೆ ಪ್ರಗತಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಮೇಲೆ ಅಸಮಾಧಾನ. ಸ್ತ್ರೀಯರಿಂದ ಸಹಾಯ ದೊರೆಯಲಿದೆ.
ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷ ಪುರಸ್ಕಾರ. ಪತ್ನಿಯೊಂದಿಗೆ ಧಾರ್ವಿುಕ ಮಂದಿರಕ್ಕೆ ಭೇಟಿ. ಮನಸ್ಸಿಗೆ ಸಮಾಧಾನ.
ಮೀನ: ಪಾಲುದಾರಿಕೆ ವ್ಯವಹಾರದಲ್ಲಿ ಮೋಸ. ಹಣಕಾಸಿನ ವ್ಯವಹಾರದಲ್ಲಿ ವಂಚನೆ ಸಾಧ್ಯತೆ. ಮನೆ ಖರೀದಿಗೆ ನಿರ್ಧಾರ.
PublicNext
04/09/2021 07:20 am