ಮೇಷ: ನಿಮ್ಮ ವ್ಯಕ್ತಿತ್ವಕ್ಕೆ ಜನ ಪ್ರಭಾವಿತರಾಗುತ್ತಾರೆ. ಯಾವುದೇ ಹೊಸ ಯೋಜನೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.
ವೃಷಭ: ಇಂದು ನಿಮ್ಮ ಕನಸು ನನಸಾಗಬಹುದು. ದುರಾಸೆಯಿಂದ ಕಾನೂನುಬಾಹಿರ ಕೆಲಸಕ್ಕೆ ಪ್ರೇರಣೆ. ಸಂಬಂಧಿಕರಿಂದ ಸಹಾಯ.
ಮಿಥುನ: ಜವಾಬ್ದಾರಿಯನ್ನು ಇತರರ ಮೇಲೆ ಹೇರಬೇಡಿ. ವ್ಯಾಪಾರಸ್ಥರಿಗೆ ಧನಲಾಭ. ಸಜ್ಜನರೊಂದಿಗೆ ಸಂಬಂಧ ರೂಪುಗೊಳ್ಳುತ್ತದೆ.
ಕಟಕ: ಸಂತಸದ ದಿನ. ವ್ಯಾಪಾರದಲ್ಲಿ ಸಾರ್ವಜನಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳುವಿರಿ. ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ.
ಸಿಂಹ: ಆರೋಗ್ಯದಲ್ಲಿ ಸುಧಾರಣೆ. ವ್ಯಾಪಾರಸ್ಥರಿಗೆ ಅನಾರೋಗ್ಯದಿಂದ ನಷ್ಟ. ಹಿರಿಯ ಅಧಿಕಾರಿಗಳಿಂದ ನಿಮ್ಮಬಗ್ಗೆ ಮೆಚ್ಚುಗೆ.
ಕನ್ಯಾ: ಅತ್ತೆ ಮಾವಂದಿರಿಗೆ ಶುಭ ಸುದ್ದಿ. ಉದ್ಯಮಿಗಳಿಂದ ಹೊಸ ಹೂಡಿಕೆಗೆ ನಿರ್ಧಾರ. ಕುಟುಂಬದಲ್ಲಿ ಸಂತೋಷದ ವಾತಾವರಣ.
ತುಲಾ: ನಿಮ್ಮ ಮಾತಿಗೆ ಇಂದು ತುಂಬ ಮನ್ನಣೆ ಇದೆ. ವೃತ್ತಿಜೀವನದ ಸನ್ನಿವೇಶ ನಿಮ್ಮ ಪರವಾಗಿವೆ. ಆರೋಗ್ಯಕರ ಆಯ್ಕೆಯಿರಲಿ.
ವೃಶ್ಚಿಕ: ದಿನವು ಉಲ್ಲಾಸಮಯವಾಗಿರುತ್ತದೆ. ಹಣಕಾಸಿನ ವಿಷಯದಲ್ಲಿ ಹೊಸ ಲಾಭ. ಕುಟುಂಬದ ಕಿರಿಯ ಸದಸ್ಯರಿಂದ ಸಹಾಯ.
ಧನುಸ್ಸು: ಆತ್ಮವಿಶ್ವಾಸದಿಂದ ವರ್ತಿಸಿ. ಕಠಿಣ ಪರಿಶ್ರಮದಿಂದ ಪ್ರತಿಕೂಲತೆ ಎದುರಿಸುತ್ತೀರಿ. ಆಸ್ತಿ ಒಪ್ಪಂದಗಳು ನಿಮ್ಮ ಪರವಾಗಿವೆ.
ಮಕರ: ಏಕಾಗ್ರತೆಯಿಂದ ಜವಾಬ್ದಾರಿ ನಿರ್ವಹಿಸಿ. ಯುವಕರಿಗೆ ವೃತ್ತಿಜೀವನದಲ್ಲಿ ಯಶಸ್ಸು. ಆಹಾರದ ಬಗ್ಗೆ ವಿಶೇಷ ಗಮನ ಕೊಡಿ.
ಕುಂಭ: ಹೆಚ್ಚುವರಿ ಆದಾಯದ ಮೂಲಕ ಆರ್ಥಿಕ ಸ್ಥಿತಿ ಉತ್ತಮ. ಸಹೋದ್ಯೋಗಿಗಳೊಂದಿಗೆ ಕೆಲಸಮಾಡುವಲ್ಲಿ ಎಚ್ಚರಿಕೆವಹಿಸಿ.
ಮೀನ: ಈ ದಿನವು ಚಟುವಟಿಕೆಯಿಂದ ಕೂಡಿರುತ್ತದೆ. ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಹಾಗೂ ವಿವಾಹ ಅಪೇಕ್ಷಿತರಿಗೆ ಶುಭಸುದ್ದಿ.
PublicNext
07/08/2021 07:18 am