ಮೇಷ: ವಿಶೇಷ ಅತಿಥಿಗಳು ಅನಿರೀಕ್ಷಿತವಾಗಿ ಮನೆಗೆ ಬರುವರು. ಸಹೋದರಿಯರಿಂದ ವಿಶೇಷ ಸಲಹೆ. ದಿನಾಂತ್ಯದಲ್ಲಿ ಶುಭವಾಗಲಿದೆ.
ವೃಷಭ: ಹಿತಶತ್ರುಗಳಿಂದ ತೊಂದರೆ. ನಂಬಿದವರಿಂದಲೇ ಮೋಸವಾಗುವ ಸಾಧ್ಯತೆ ಜಾಸ್ತಿ. ಹುಷಾರಾಗಿರಿ. ಮಾತಿನ ಬಗ್ಗೆ ನಿಗಾ ಇರಲಿ.
ಮಿಥುನ: ಮಕ್ಕಳಿಂದ ಸಮಸ್ಯೆ ಬರಬಹುದು. ಮೃದು ಮಾತುಗಳಿಂದಲೇ ಬಗೆಹರಿಸಿ. ಅನವಶ್ಯಕ ವಾಗ್ವಾದಗಳಿಗೆ ಆಸ್ಪದ ಬೇಡ.
ಕಟಕ: ಆತ್ಮೀಯರೊಂದಿಗೆ ಕಾಲ ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ದಿನಾಂತ್ಯದಲ್ಲಿ ಆಯಾಸ.
ಸಿಂಹ: ನೂತನ ವಾಹನ ಖರೀದಿ ಕುರಿತು ಸಮಾಲೋಚನೆ. ಆತ್ಮೀಯರ ಸಮಾಗಮ. ದಿನಾಂತ್ಯದಲ್ಲಿ ವಿಹಾರ.
ಕನ್ಯಾ: ಸಹೋದರರೊಂದಿಗೆ ಘರ್ಷಣೆ ಉಂಟಾಗುವ ಸಂಭವ. ಆಸ್ತಿ ವಿಚಾರದಲ್ಲಿ ತಾಳ್ಮೆಯಿಂದಿರಿ. ಮಾತಿನ ಮೇಲೆ ಹಿಡಿತವಿರಲಿ.
ತುಲಾ: ಆರೋಗ್ಯದ ಬಗ್ಗೆ ವೈದ್ಯರ ಸಲಹೆ ಪಡೆಯಿರಿ. ಕಲಾವಿದರಿಗೆ ವಿಶೇಷ ದಿನ. ದಿನಾಂತ್ಯದಲ್ಲಿ ಸಂತೋಷಕೂಟ.
ವೃಶ್ಚಿಕ: ಬಹಳ ದಿನದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ. ಹಿರಿಯರ ಆಶೀರ್ವಾದ. ದಿನಾಂತ್ಯದಲ್ಲಿ ಆರೋಗ್ಯ ಸಮಸ್ಯೆ.
ಧನಸ್ಸು: ರಾಶ್ಯಾಧಿಪತಿ ನೀಚತ್ವದಿಂದ ಯಾವ ಕೆಲಸದಲ್ಲೂ ಅಭಿವೃದ್ಧಿ ಇಲ್ಲ. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ದುರ್ಗೆಯನ್ನು ಆರಾಧಿಸಿ.
ಮಕರ: ಮಾನಸಿಕ ಅಶಾಂತಿ. ವೈದ್ಯರ ಸಲಹೆಯನ್ನು ಪಾಲಿಸದಿದ್ದರೆ ಆರೋಗ್ಯ ಹದಗೆಡಬಹುದು. ಕೃಷಿಕರಿಗೆ ಖುಷಿಯ ದಿನ.
ಕುಂಭ: ಕುಟುಂಬದವರ ಬಗ್ಗೆ ಮೃದುಧೋರಣೆ ಅನುಸರಿಸಿ. ಹಿತಶತ್ರುಗಳ ಬಗ್ಗೆ ಅನುಕಂಪ ತೋರಿಸಲು ಹೋಗಬೇಡಿ.
ಮೀನ : ಅನಿರೀಕ್ಷಿತ ಧನಲಾಭ. ಸ್ನೇಹಿತರಿಂದ ಪ್ರಶಂಸೆ. ಮಾನಸಿಕ ನೆಮ್ಮದಿ. ಸಂಜೆಯ ಹೊತ್ತಿಗೆ ವಿಪರೀತ ಆಯಾಸದಿಂದ ಬೇಸರ.
PublicNext
07/02/2021 07:14 am