ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 17.1.2021

ಮೇಷ: ಸಂಘಟನಾ ಚಾತುರ್ಯವನ್ನು ಚೆನ್ನಾಗಿಯೇ ಅರಿತುಕೊಂಡಿರುವ ನೀವು ಅದನ್ನು ಸದ್ಯದಲ್ಲೇ ವರ್ಧಿಸಿಕೊಳ್ಳುವ ಅಗತ್ಯವಿದೆ.

ವೃಷಭ: ಅನಿವಾರ್ಯವೆನಿಸಿದಂಥ ಕೆಲವು ಹೆಜ್ಜೆಗಳನ್ನು ಇಡುವುದರಿಂದ ವಿರೋಧಿಗಳು ಸೃಷ್ಟಿಯಾಗುವ ಸಾಧ್ಯತೆಗಳು ಅಧಿಕ. ಎಚ್ಚರ.

ಮಿಥುನ: ಮಕ್ಕಳ ಭವಿಷ್ಯದ ವಿಚಾರವಾಗಿ ಕಾತರದ ಕ್ಷಣಗಳನ್ನು ಎದುರಿಸುವಿರಿ. ಶ್ರದ್ಧಾಭಕ್ತಿಗಳಿಂದ ಪರಶಿವನ ಸ್ತುತಿ ಮಾಡಿ.

ಕಟಕ: ಆಸ್ತಿಯ ವಿವಾದದ ವಿಚಾರದಲ್ಲಿ ಅದೃಷ್ಟವಶಾತ್ ಕೆಲವು ರಾಜಿಸೂತ್ರಗಳು ಒದಗಿಬರಲಿವೆ. ಅವನ್ನು ಖಂಡಿತ ತಿರಸ್ಕಾರ ಮಾಡದಿರಿ.

ಸಿಂಹ: ಮೊಂಡುತನವನ್ನು ಪ್ರದರ್ಶಿಸುತ್ತಲಿದ್ದೀರಿ. ಅನೇಕರು ಒಂದೇ ವಿಚಾರ ಹೇಳುತ್ತಿರುವಾಗ ಒಪ್ಪಿಕೊಳ್ಳುವ ಔದಾರ್ಯ ತೋರಿ.

ಕನ್ಯಾ: ಹೊಸದೇ ಆದ ಕಾರ್ಯವಿಧಾನಗಳು ಹಾಗೂ ಕಾರ್ಯತಂತ್ರಗಳೊಂದಿಗೆ ಕೆಲವು ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯ.

ತುಲಾ: ಕೆಲವು ಹಳೆಯ ಸಮಸ್ಯೆಗಳು ಮತ್ತೆ ಮತ್ತೆ ಧುತ್ತೆಂದು ಎದುರಾಗಿಬಿಡಬಹುದು. ನಿರೀಕ್ಷಿತ ಯಶಸ್ಸಿಗೆ ಆತಂಕ ಬರಬಹುದು.

ವೃಶ್ಚಿಕ: ಹಣದ ಬಗೆಗಿನ ನಿರೀಕ್ಷೆಗಳು ಸ್ವಲ್ಪಮಟ್ಟಿಗೆ ನಿರಾಸೆಯನ್ನೇ ಉಂಟುಮಾಡಬಹುದು. ಯಶಸ್ಸಿಗೆ ನವ ಸೂತ್ರ ಶೋಧಿಸಿ.

ಧನುಸ್ಸು: ಸಹೋದ್ಯೋಗಿಗಳು ನಿಮ್ಮ ಕ್ರಿಯಾಶೀಲತೆಯನ್ನು ಬಹುವಾಗಿ ಪ್ರಶಂಸಿಸುತ್ತಾರೆ. ಗೆಲುವಿಗೆ ಬೇಕಾದ ಹೆದ್ದಾರಿಯೂ

ಲಭ್ಯವಾಗುತ್ತದೆ.

ಮಕರ: ಹೊಸ ಜಮೀನು, ಒಡವೆ ಇತ್ಯಾದಿಗಳನ್ನು ಖರೀದಿಸುವ ಯೋಚನೆಗಳನ್ನು ಕೊಂಚ ತಾಳ್ಮೆಯಿಂದ ಪರೀಕ್ಷಿಸಿಕೊಳ್ಳಿ.

ಕುಂಭ: ನಿಮ್ಮ ಗೊತ್ತುಗುರಿಗಳನ್ನು ಸಾಧಿಸುವುದಕ್ಕೆ ಸೂಕ್ತ ದಿನವಿದು. ಹೊಸ ವಿಚಾರಗಳನ್ನೂ ಕೂಡ ಹೊಂದಿಸಿಕೊಂಡರೆ ಜಯವಿದೆ.

ಮೀನ : ಮನೆ ಕಟ್ಟುವ ವಿಚಾರಕ್ಕೆ ಮೊದಲ ಆದ್ಯತೆಯನ್ನೇ ನೀಡಬೇಕೆಂಬುದು ಸರಿ. ಆದರೂ ಅಧಿಕ ಸಾಲದ ಹೊರೆ ಹೊರುವ ಸಂಕಷ್ಟ

ಬೇಡ.

Edited By : Nirmala Aralikatti
PublicNext

PublicNext

17/01/2021 07:12 am

Cinque Terre

27.8 K

Cinque Terre

0