ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 30.12.2020

ಮೇಷ: ಪರಿಚಿತರಾಗುವವರೆಲ್ಲ ಪ್ರಯೋಜನಕಾರಿಗಳೇ ಆಗಿರುವುದಿಲ್ಲ. ಕೆಲವೊಮ್ಮೆ ಅಪರಿಚಿತರಿಂದಲೂ ಸಹಾಯ ಸಹಕಾರ ಸಿಗುತ್ತದೆ.

ವೃಷಭ: ಕಚೇರಿಯ ಕೆಲಸಕಾರ್ಯಗಳಲ್ಲಿನ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಿ. ವ್ಯರ್ಥವಾಗಿ ಕಾಲ ಕಳೆಯುವಂಥ ಜನರನ್ನು ನಿರ್ಲಕ್ಷಿಸಿದರೆ ಒಳಿತು.

ಮಿಥುನ: ಅಜ್ಞಾನದಿಂದಾಗಿ ಶತ್ರುಗಳನ್ನು ಬಹಳ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿದ್ದೀರಿ. ಮಣಿಕಂಠನ ಸ್ತುತಿಯಿಂದ ಸುಕ್ಷೇಮವೇ ಉಂಟಾಗಲಿದೆ.

ಕಟಕ: ಯಶಸ್ಸು ನಿರೀಕ್ಷಿತ ಬಗೆಯಲ್ಲಿ ಕೈಗೆಟುಕದು. ಅನಿರೀಕ್ಷಿತವಾದ ವಿಧಾನವೊಂದು ಗೆಲುವಿನ ಕಡೆ ಕೈಹಿಡಿದು ನಡೆಸಲಿದೆ.

ಸಿಂಹ: ಜೂಜು, ರೇಸ್ ನಂಥವುಗಳಿಗೆ ಏನೇನೋ ತಂತ್ರಗಳನ್ನು ನಂಬಿದರೆ ಜೇಬಿಗೆ ಕತ್ತರಿ ಬೀಳಲಿದೆ. ಜೋಪಾನವಾಗಿರಿ.

ಕನ್ಯಾ: ಯಾವ ಪರಿಶ್ರಮವೂ ಇರದೆ ಮಹತ್ವದ್ದನ್ನು ಸಾಧಿಸಬೇಕು ಎಂಬ ವಿಚಾರವನ್ನು ಕೈಬಿಡಿ. ಶ್ರಮದಿಂದ ಸಿದ್ಧಿಯಿದೆ.

ತುಲಾ: ಆರೋಗ್ಯದ ಬಗೆಗೆ ಸ್ವಲ್ಪ ಮಟ್ಟಿಗೆ ಅಲಕ್ಷ್ಯ ಮಾಡುತ್ತಿದ್ದೀರಿ. ತಜ್ಞ ವೈದ್ಯರ ಭೇಟಿ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ವೃಶ್ಚಿಕ: ವೃತ್ತಿಯ ಒತ್ತಡ ಇದ್ದೇ ಇರುತ್ತದೆ. ನಿಮ್ಮ ನೆಚ್ಚಿನ ಹವ್ಯಾಸಗಳನ್ನು ಮರೆಯದೆ ಮುಂದುವರಿಸಿದರೆ ಸಂತಸ, ನೆಮ್ಮದಿ ಲಭಿಸುತ್ತದೆ.

ಧನುಸ್ಸು: ನಕಾರಾತ್ಮಕ ಆಲೋಚನೆಯ ಜನರು ಭೇಟಿಯಾಗಬಹುದು. ಯಾವುದೇ ಬಗೆಯ ವಿವಾದಗಳಿಗೆ ಆಸ್ಪದ ಬೇಡ.

ಮಕರ : ಅನಿರೀಕ್ಷಿತ ತಿರುವುಗಳಿಂದ ಆಯಾಸಪಡಲಿದ್ದೀರಿ. ಆದರೂ ವಿಶೇಷವಾದ ಅನಿರೀಕ್ಷಿತ ಲಾಭದಿಂದ ಹರ್ಷದಾಯಕವಾಗಿ ಇರಲಿದ್ದೀರಿ.

ಕುಂಭ: ಬಹುದಿನಗಳಿಂದ ನಿರೀಕ್ಷಿಸಿದ ಕಾರ್ಯವೊಂದು ಸಫಲವಾಗುವ ಮೂಲಕ ವಿಶೇಷವಾದ ಸಂತೃಪ್ತಿಯನ್ನು ಹೊಂದಲಿದ್ದೀರಿ.

ಮೀನ: ನಿಮ್ಮ ಒಡನಾಟಗಳಿರುವುದು ಬುದ್ಧಿವಂತರ ಜತೆಗೆ ಮಾತ್ರ. ಅದು ಸರಿಯೇ ಆಗಿದ್ದರೂ ಮುಗ್ಧರನ್ನೂ ಜತೆಗಿಟ್ಟುಕೊಳ್ಳಿ.

Edited By : Nirmala Aralikatti
PublicNext

PublicNext

30/12/2020 07:23 am

Cinque Terre

34.7 K

Cinque Terre

0