ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನಭವಿಷ್ಯ 26-12-2020

ಮೇಷ ರಾಶಿ: ಸ್ವಲ್ಪ ಒತ್ತಡವಿದೆ. ಮಾರ್ಚ್ ಹದಿನೈದರ ನಂತರ ಅದ್ಭುತವಾದ ಸಮಯಗಳು ನಿಮಗೆ ಇರಲಿದೆ. ಅಲ್ಲಿಯವರೆಗೂ ಸ್ವಲ್ಪ ತಳಮಳ ಗೊಂದಲ ಇರಲಿದೆ. ಹೆಂಡತಿ, ಹೆಂಡತಿಯ ಮೂಲಕ ಖರ್ಚು, ಗಂಡ, ಗಂಡನ ಮೂಲಕ ಖರ್ಚು, ವಾದ- ವಿವಾದ, ಜಟಾಪಟಿ ಬಂದರೂ ಕೂಡ ಯೋಗಕಾರಕ ಚಂದ್ರ ಆಗಿರುವುದರಿಂದ ಒತ್ತಡ ಏನೆಲ್ಲ ಒಳ್ಳೆಯ ಫಲ ನಿಮಗೆ ದೊರೆಯಲಿದೆ ಶುಭವಾಗಲಿ.

ವೃಷಭ ರಾಶಿ: ವಿಜಯ ನಿಮಗೆ, ಮಾಡುವ ಕೆಲಸ, ಕಾರ್ಯ, ಸ್ವಂತ ನಿರ್ಧಾರ, ಸ್ವಂತ ವ್ಯಾಪಾರ, ಟೆಕ್ನಿಕಲ್, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಫೈನಾನ್ಶಿಯಲ್, ಕೆಲಸ ಮಾಡುತ್ತಿರುವರಿಗೆ ಶುಭ ರೋಚಕವಾದ ದಿನ.

ಮಿಥುನ ರಾಶಿ: ಕೆಲವೊಂದು ಸಮಯ ಏನೋ ಮಾಡಲು ಹೋಗಿ ಏನೋ ಮಾಡಿಕೊಳ್ಳುತ್ತೀರಿ. ಆ ರೀತಿಯ ಒಂದು ಪ್ರಭಾವ ಇರುತ್ತದೆ. ದುಡುಕಬೇಡಿ ಆದಷ್ಟು ಬೇರೆಯವರ ಕೈಯಲ್ಲಿ ಕೆಲಸ ಮಾಡಿಸಲು ಹೊರಡಿ ಮಿಕ್ಕಂತೆ ಯಾವ ತೊಂದರೆಗಳಿಲ್ಲ ಎಚ್ಚರಿಕೆ. ವಿಜಯೋತ್ಸವ ಮಾಡುವ ಕೆಲಸ, ಎಲ್ಲದರಲ್ಲೂ ಪರಿಪೂರ್ಣ ವಿಜಯವೇ ನಿಮಗೆ ಯೋಚಿಸಬೇಡಿ.

ಕಟಕ ರಾಶಿ: ಸೂರ್ಯ ಭಾವದಲ್ಲಿ ಚಂದ್ರ ಅದ್ಭುತವೇ. ಆದರೆ ನಿಮ್ಮಿಂದ ಬೇರೆಯವರಿಗೆ ಲಾಭ. ಆದ್ದರಿಂದ ಥಣಿಯದಂತ ಬಿಸಿ. ಸ್ವಲ್ಪ ಬಿಸಿ ಬಿಸಿ ಆಗಿರುತ್ತೀರಿ ಜಾಗರೂಕತೆ. ಪೂರ್ಣ ಬಿಸಿಯೇ! ನೀವು ದರ್ಪ, ತೇಜಸ್ಸು, ಗತ್ತು, ತೂಕ ಯಾರನ್ನು ಸುಟ್ಟು ಹಾಕುತ್ತದೆ ಗೊತ್ತಿಲ್ಲ. ಅದನ್ನು ಸರಿಯಾಗಿ ನಿಮ್ಮ ಅಧಿಕಾರಕ್ಕೆ ಬಳಸಿಕೊಳ್ಳುವಂಥದ್ದು ಮಾಡಿ ಒಳ್ಳೆಯದಾಗಲಿದೆ.

ಸಿಂಹ ರಾಶಿ: ಬೇವು ಇಲ್ಲ, ತೀರಾ ಸಿಹಿಯೂ ಇಲ್ಲ. ಪರಿಶ್ರಮಕ್ಕೆ ತಕ್ಕಂತ ಫಲ ಶುಭವಾಗಲಿದೆ. ನಿಮ್ಮ ಕೆಲಸದ ಬಗ್ಗೆ ಹೆಚ್ಚು ಅರಿವು ಇರಲಿ, ನಿಮ್ಮ ಶ್ರಮವನ್ನು ನಂಬಿ ಒಳ್ಳೆಯದಾಗಲಿದೆ.ದೈವದಿಂದ ಹೆಜ್ಜೆ ಇಡುವ ಯಾವುದೇ ಕಾರ್ಯಗಳಾಗಲಿ, ನಿಶ್ಚಲತೆಯನ್ನು ನೋಡುವುದಿಲ್ಲ, ವಿಪರೀತ ಧೈರ್ಯ ಎಚ್ಚರಿಕೆ.

ಕನ್ಯಾ ರಾಶಿ: ಈ ದಿನ ಉತ್ತರಫಾಲ್ಗುಣಿ ನಕ್ಷತ್ರ ಆಗಿರುವುದರಿಂದ ಸೂರ್ಯ ನಿಮಗೆ ವಿಶೇಷ ಬಲವನ್ನು ತಂದು ಕೊಟ್ಟರೂ, ಬುಧ ಸ್ವಲ್ಪ ಆತುರ ಪಡಿಸುತ್ತಾನೆ. ಹಣಕಾಸು ಕಳೆದುಕೊಳ್ಳುತ್ತೀರಿ ಎಚ್ಚರಿಕೆ. ಸರ್ಕಾರಿ ಮಟ್ಟದ ಕೆಲಸ, ಕಾರ್ಯಗಳಲ್ಲಿ ವಿಶೇಷ ಪ್ರಗತಿ ಕಾಣ ತಕ್ಕಂತ ಒಂದು ದಿನ. ತಂದೆಯ ಜೊತೆ ಒಂದು ಸ್ವಲ್ಪ ವಾದ-ವಿವಾದ ಉಂಟು.

ತುಲಾ ರಾಶಿ: ಹೊಸ ಮನೆ, ಆಸ್ತಿ ಖರೀದಿಗೆ ಸಕಾಲವಾಗಿದ್ದು ಈ ನಿಟ್ಟಿನಲ್ಲಿ ಯಾವುದೇ ಅಳುಕಿಲ್ಲದೆ ಮುಂದಡಿ ಇಡಿ. ಅತಿ ಉದ್ವೇಗ ಒಳ್ಳೆಯದಲ್ಲ. ಪ್ರತಿಯೊಂದನ್ನೂ ಸಮಾಧಾನದಿಂದ ಆಲೋಚಿಸಿ. ಮಕ್ಕಳ ಹಠ ನಿಮ್ಮ ಏಕಾಗ್ರತೆಗೆ ಭಂಗ ತರುವ ಸಾಧ್ಯತೆ ಇದೆ. ಮತ್ತೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುನ್ನಡೆದರೆ ಜೀವನ ಪ್ರಗತಿ ಪಥದಲ್ಲಿ ಸಾಗುವುದು. ಯಾವುದೇ ಕಾರಣಕ್ಕೂ ವೃತ್ತಿ ರಹಸ್ಯವನ್ನು ಮತ್ತೊಬ್ಬರಿಗೆ ಬಿಟ್ಟು ಕೊಡಬೇಡಿ.

ವೃಶ್ಚಿಕ ರಾಶಿ: ವ್ಯಾಪಾರ ವಹಿವಾಟುಗಳು ಚೆನ್ನಾಗಿ ನಡೆದರೂ ನಿರೀಕ್ಷಿತ ಲಾಭ ದೊರೆಯದೆ ಹೋಗಬಹುದು. ಖಾಸಗಿ ಕಂಪನಿ ನೌಕರರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವರು. ಪ್ರಯಾಣದಲ್ಲಿ ತುಸು ಎಚ್ಚರಿಕೆಯಿರಲಿ. ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವಿರಿ. ಮಠಗಳಿಂದ ಹೆಚ್ಚಿನ ಗೌರವ ಸಿಗುವುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರದಿಂದಿರಿ. ನೀವು ಎಷ್ಟೇ ವೇಗದಿಂದ ಕೆಲಸ ಮಾಡಲು ಹೋದರೂ ಕಾರ್ಯ ವಿಳಂಬವಾಗುವುದು. ಮನೆಯಲ್ಲಿನ ಮಂಗಳ ಕಾರ್ಯಕ್ಕೆ ಗುರು ಹಿರಿಯರ ಆಶೀರ್ವಾದ ದೊರೆಯುವುದು. ಉದರಕ್ಕೆ ಸಂಬಂಧಪಟ್ಟ ತೊಂದರೆಗಳು ಕಾಣಿಸಿಕೊಳ್ಳುವವು. ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಿ.

ಧನುಸ್ಸು ರಾಶಿ: ಖರ್ಚಿನ ಮೇಲೆ ನಿಗಾ ಇಡುವುದು ಒಳ್ಳೆಯದು. ಸ್ಥಿರ ಚರ ಆಸ್ತಿ ವಿಚಾರಗಳಲ್ಲಿ ಬಂಧುಗಳ ನಡುವೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಗುರು ಹಿರಿಯರ ಮಧ್ಯಸ್ಥಿಕೆಯಿಂದ ಅನುಕೂಲವಾಗುವುದು. ಉಪನ್ಯಾಸ, ಭಾಷಣಗಳ ಮೂಲಕ ಜನರನ್ನು ಆಕರ್ಷಿಸುವಿರಿ. ಆಸ್ತಿ ದಾಖಲೆಗಳು ನಿಮ್ಮ ಕೈ ಸೇರಲಿವೆ. ಹಣಕಾಸಿನ ವಿಷಯದಲ್ಲಿ ತೊಂದರೆ ಇಲ್ಲ. ಹಣ ಉಳಿತಾಯದ ಕಡೆ ಗಮನ ಹರಿಸಿ.

ಮಕರ ರಾಶಿ: ಲೇವಾದೇವಿ ವ್ಯವಹಾರದಲ್ಲಿ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಗತಿಯ ಕಾಲವಾಗಿದ್ದು, ನಿಮ್ಮ ಕನಸು ನನಸಾಗುವುದು. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಪ್ರಯಾಣ ಕಾಲದಲ್ಲಿ ನರಸಿಂಹ ದೇವರ ಪ್ರಾರ್ಥನೆ ಮಾಡಿ, ಒಳಿತಾಗುವುದು.

ಕುಂಭ ರಾಶಿ: ವ್ಯಾಪಾರ ವ್ಯವಹಾರದಲ್ಲಿ ನಿಗದಿತ ಲಾಭಾಂಶ ಕಂಡುಬರುವುದು. ಹಣಕಾಸಿನ ನೆರವು ಕೇಳಿಕೊಂಡು ನಿಮ್ಮ ಸ್ನೇಹಿತರು ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ಒಳ್ಳೆಯ ಕಾರ್ಯಗಳಿಗೆ ಅನೇಕ ವಿಘ್ನಗಳು ತಲೆದೋರುವವು. ಹಿರಿಯರ ಮಾರ್ಗದರ್ಶನದಂತೆ ನಡೆದರೆ ಒಳಿತಾಗುವುದು. ಆಂಜನೇಯ ಸ್ವಾಮಿಯ ಜಪ ಮಾಡಿ.

ಮೀನ ರಾಶಿ: ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವವು. ಅಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬದ ಸದಸ್ಯರೊಂದಿಗೆ ದೇವರ ದರ್ಶನ ಪಡೆಯುವಿರಿ. ಮನಸ್ಸಿಗೆ ಮುದ ನೀಡುವ ದಿನ. ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿವೆ.ವಿವಾಹ ಯೋಗ್ಯರಿಗೆ ಕಂಕಣಬಲ ಕೂಡಿಬರುವುದು. ಮದುವೆ ಮಾತುಕತೆ ಫಲಪ್ರದವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡಲಿದೆ.

Edited By : Vijay Kumar
PublicNext

PublicNext

26/12/2020 07:20 am

Cinque Terre

32.41 K

Cinque Terre

1