ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 28-09-2020

ಪಂಚಾಂಗ:

ರಾಹುಕಾಲ: 7.43 ರಿಂದ 9.13

ಗುಳಿಕಕಾಲ: 1.44 ರಿಂದ 3.14

ಯಮಗಂಡಕಾಲ: 10.43 ರಿಂದ 12.13

ವಾರ: ಸೋಮವಾರ,

ತಿಥಿ: ದ್ವಾದಶಿ,

ನಕ್ಷತ್ರ: ಧನಿಷ್ಠ,

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,

ಶರದ್ ಋತು, ಅಧಿಕ ಆಶ್ವಯುಜ ಮಾಸ, ಶುಕ್ಲ ಪಕ್ಷ

ಮೇಷ :

ವಿನಾಕಾರಣ ನಿಂದೆಯ ಸಂಭವವಿದೆ. ಖರ್ಚುಹೆಚ್ಚಾಗುವದು ಯೋಗ ಇರುವದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವದು.

ವೃಷಭ :

ಉದರಬೇನೆ ಬರುವ ಸಾಧ್ಯತೆ ಇದೆ ಆರೋಗ್ಯದ ಕಾಳಜಿವಹಿಸಿ. ಬಂಧುಮಿತ್ರರ ಭೇಟಿ, ಮನೆಯಲ್ಲಿ ಮಂಗಲಕಾರ್ಯ ಜರುಗುವ ಯೋಗವಿದೆ. ಕೋರ್ಟನಲ್ಲಿರುವ ವ್ಯಾಜ್ಯಗಳು ಕೊನೆಗೊಳ್ಳುವವು.

ಮಿಥುನ :

ಯಾವದೇ ಅಡೆತಡೆ ಇಲ್ಲದ ನಿರಾತಂಕ ಜೀವನ ಇರುವದು. ಸಾಮಜಿಕ ಕಾರ್ಯಗಳಿಂದ ಗೌರವಾದರಗಳು ದೊರೆಯುವವು. ಆಶೆಗೆ ತಕ್ಕಂತೆ ಫಲಗಳು ಕೈಗೂಡುವವು. ಬಂಧುಗಳಲ್ಲಿ ಮನಸ್ತಾಪ ಕಂಡುಬರುವದು

ಕರ್ಕ :

ಹೊಟ್ಟೆಕಿಚ್ಚು ಮಾಡುವವರಿಗೆ ತಕ್ಕ ಶಾಸ್ತಿಯಾಗಲಿದೆ. ಶತ್ರುಗಳು ತಾವಾಗಿಯೇ ದೂರಸರಿಯುವರು. ಜನರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಯಾಗುವದು. ಯುಕ್ತಿಯಿಂದ ಕಾರ್ಯಸಾಧಿಸುವಿರಿ.

ಸಿಂಹ :

ದೂರಾಲೋಚನೆ ಮಾಡಿ ಕಾರ್ಯ ನಿರ್ವಹಿಸಿರಿ. ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ನೆಮ್ಮದಿಯ ಜೀವನ ಇರುವದು. ಉದ್ಯೋಗವನ್ನು ವಿಸ್ತರಿಸುವ ಕಾಲ ಇರುವದು.

ಕನ್ಯಾ :

ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವದು.ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವದು. ಆರೋಗ್ಯದ ಮೇಲೆ ನಿಗಾ ಇರಲಿ.

ತುಲಾ :

ಉನ್ನತ ಹುದ್ದೆ ದೊರೆಯುವ ಸಾಧ್ಯತೆ ಇದೆ. ಸಾಧನೆಗೆ ಸೂಕ್ತ ಅವಕಾಶ ದೊರೆಯುವದು. ಹಣಕಾಸಿನ ತೊಂದರೆಗಳು ಪರಿಹಾರವಾಗುವವು. ವ್ಯವಹಾರಗಳಲ್ಲಿ ಗೌಪ್ಯತೆ ಇರಲಿ. ಹಿತಶತ್ರುಗಳಿಂದ ತೊಂದರೆಯಾಗುವ ಸಧ್ಯತೆ ಇದೆ.

ವೃಶ್ಚಿಕ :

ಯೋಜನಾಬದ್ಧ ಕೆಲಸಗಳೂ ಕೂಡ ಮುಂದೂಡುವ ಪ್ರಸಂಗವಿದೆ. ಆಪ್ತವಲಯದಲ್ಲಿ ಸಮಾಲೋಚಿಸಿರಿ. ಅನಿವಾರ್ಯ ಕರ್ತವ್ಯಗಳಿಗೆ ಸಮಯ ಹೊಂದಾಣಿಕೆ ಮಾಡುವ ಸಾಧ್ಯತೆ ಇದೆ. ಆರ್ಥಕ ಸಂಕಷ್ಟಗಳು ಎದುರಾಗುವವು.

ಧನು :

ಅಲ್ಪ ತ್ರಾಸದಾಯಕ. ಗಡಿಬಿಡಿಯ ವಾತಾವರಣ, ಆರೋಗ್ಯದಲ್ಲಿ ಏರುಪೇರು ಸಂಭವ. ಮಹತ್ವದ ಕೆಲಸಗಳನ್ನು ಮುಂದೂಡುವದು ಒಳ್ಳೆಯದು. ಮಂಗಲಕಾರ್ಯ, ಹೆಸರು, ಕಡಲೆ ದಾನ ಮಾಡಿರಿ.

ಮಕರ:

ಹಣಕಾಸಿನ ವ್ಯವಹಾರದಲ್ಲಿ ಧ್ಯರ್ಯದಿಂದ ಕಾರ್ಯ ಸಾಧನೆ. ಅಪೇಕ್ಷಸದ ಲಾಭ ಸಂಭವ. ಗಡಿಬಿಡಿಯ ವಾತಾವತರಣ, ಬಿಡುವಿಲ್ಲದ ಕಾರ್ಯ, ಮಿತ್ರರೊಂದಿಗೆ ಜಟಾಪಟಿ ಸಂಭವ, ದೀಪದಾನ ಮಾಡಿರಿ.

ಕುಂಭ :

ದೂರ ಪ್ರಯಾಣದ ಅವಶ್ಯಕತೆ ಕಂಡುಬರುವದು. ಗುಪ್ತ ಧನ, ಲಾಟರಿ, ವ್ಯಾಪಾರದಲ್ಲಿ ಬೆಲೆಗಳ ಹೆಚ್ಚಳದಿಂದ ಲಾಭ. ಅನೇಕ ರೀತಿಯ ಸೌಭಾಗ್ಯಗಳು ದೊರೆಯುವವು.ಅನಾವಶ್ಯಕ ಮಾತು, ಸಿಟ್ಟು, ಅಹಂಕಾರದಿಂದ ಹಾಗೂ ಅಗ್ನಿ, ವಿದ್ಯುತ್, ಮಶಿನರಿಗಳಿಂದ ತೊಂದರೆ ಸಾಧ್ಯತೆ

ಮೀನ :

ಹೊಸ ಯೋಜನೆಗಳು ಬೇಡ.ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವದು. ಕೊಟ್ಟ ಸಾಲ ಮರುಪಾವತಿ ಆಗಲಾರದು,ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಧ್ಯತೆ ಇದೆ.

Edited By :
PublicNext

PublicNext

28/09/2020 07:35 am

Cinque Terre

30.96 K

Cinque Terre

0