ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 05.10.2020

ಮೇಷ : ಟೀಕಿಸುವವರನ್ನು ಜಾಣತನದಿಂದ ಹತ್ತಿಕ್ಕುವಿರಿ. ಬಹಳ ದಿನದ ಬಯಕೆ ಈಡೇರಿ ಹರ್ಷ ಮೂಡುವದು. ಪ್ರಮುಖ ಕಾರ್ಯಕ್ಕೆ ಆದ್ಯತೆ ಕೊಡುವಿರಿ.

ವೃಷಭ : ಬುದ್ಧಿವಂತಿಕೆಗೆ ತಕ್ಕ ಗೌರವ ಸನ್ಮಾನಗಳು ಒಲಿದು ಬರುವವು. ನೌಕರಿಯಲ್ಲಿ ಬಡ್ತಿ ಯೋಗವಿದೆ. ಅಹಂಕಾರದ ದೋಷ ಇರುವುದರಿಂದ ತೊಂದರೆ ಸಂಭವ.

ಮಿಥುನ : ಉತ್ತಮ ಸಹಕಾರ ಮನೋಭವವಿರುವದು. ಆರ್ಥಿಕ ಉನ್ನತಿಯಾಗುವದು. ಬಂಧುಗಳ ಸಹಾಯ ದೊರೆತು ಕೆಲಸ ಸುಗಮವಾಗುವದು.

ಕರ್ಕ : ಹಿತಶತೃಗಳು ತೋದರೆಗೆ ಸಿಲುಕಿಸುವ ಸಂಭವವಿದೆ ಎಚ್ಚರಿಕೆ ವಹಿಸುವದು ಸೂಕ್ತ. ಮಾನಾಪಮಾನಕ್ಕಿಂತ ಜೀವನ ಮುಖ್ಯವೆನ್ನುವ ಧೋರಣೆ ಇರುವದು.

ಸಿಂಹ : ಆರೋಗ್ಯದಲ್ಲಿ ಏರುಪೇರು ಸಂಭವ. ದ್ವಂದ್ವತೆಯಿಂದ ಹಿಡಿದ ಕಾರ್ಯಗಳು ದೂರ ಹೋಗುವವು. ಹಿತೈಷಿಗಳ ನುಡಿಯಂತೆ ನಡೆಯುವಿರಿ. ಅಪರಿಚಿತರೊಂದಿಗೆ ವಾದ ಬೇಡ.

ಕನ್ಯಾ : ಸಂಗಡಿಗರ ಬೇಕು ಬೇಡಗಳನ್ನು ಈಡೇರಿಸುವ ಪ್ರಯತ್ನ ಮಾಡುವಿರಿ. ಅಪಘಾತದಿಂದ ಪಾರಾಗುವ ಯೋಗವಿದೆ. ಅಪೂರ್ಣಕಾರ್ಯಗಳಿಗೆ ಚಾಲನೆ ದೊರೆಯಲಿದೆ.

ತುಲಾ : ಮಹತ್ತರ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸತತ ಪ್ರಯತ್ನಿಸುವಿರಿ. ದೊಡ್ಡ ಮಟ್ಟದ ಕಾರ್ಯಕಲಾಪಗಳಲ್ಲಿ ಭಾಗವಹಿಸುವಿರಿ. ಮದುವೆಯ ಮಾತುಕತೆ ಸಂಭವ.

ವೃಶ್ಚಿಕ : ಒಂದೇ ನಿಲುವಿಗೆ ಅಂಟಿಕೊಂಡು ಪರದಾಡುವ ಯೋಗವಿದೆ. ಬದಲೀ ಯೋಜನೆ ಮಾಡಿರಿ. ಕಾರ್ಯಯಶ ದೊರೆಯುವದು. ಗುರುಬಲ ಉತ್ತಮವಾಗಿದೆ.

ಧನು : ತರ್ತು ಪರಿಸ್ಥಿತಿ ನಿರ್ವಹಣೆ ಮಾಡಬೇಕಾಗುವದು. ಸರಿಯಾದ ವ್ಯಕ್ತಿಯ ಪರಿಚಯ ಸಂಭವ. ಅನಾನುಕೂಲತೆಯ ಮಧ್ಯೆಯೂ ಮಂಗಲಕಾರ್ಯ ಕೂಡಿ ಬರುವದು.

ಮಕರ : ಹಳೆಯ ಯೋಜನೆಗಳಿಗೆ ಮರುಜೀವ ಕೊಡುವಿರಿ. ಕೆಲಸದಲ್ಲಿ ಬದಲಾವಣೆ ಬಯಸಿ ಬೇರೆ ಸ್ಥಳದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುವಿರಿ. ಸಾಡೇಸಾತಿ ದೋಷದ ಪರಿಹಾರ ಕಂಡುಬರುವವು.

ಕುಂಭ : ಅಂದುಕೊಂಡ ಯೋಜನೆ ನೆರವೇರಿ ಖುಷಿ ಅನುಭವಿಸುವ ಯೋಗವಿದೆ. ಆರ್ಥಿಕ ಸಬಲತೆ ಇರುವದು. ಹಿರಿಯರ ಮಾರ್ಗದರ್ಶನ ದೊರೆಯುವದು.

ಮೀನ : ಹಣಕಾಸಿನ ವ್ಯವಹಾರ ಉತ್ತಮವಾಗುವದು. ವಿದ್ಯಯಲ್ಲಿ ಕೀರ್ತಿ ದೊರೆಯುವದು. ಸಹಾಯ ಬಯಸುವವರಿಗೆ ಧೈರ್ಯ ಕೊಡುವಿರಿ. ಶಕ್ತಿಮೀರಿದ ಪರೋಪಕಾರ ಮಾಡುವಿರಿ.

Edited By : Nirmala Aralikatti
PublicNext

PublicNext

05/10/2020 07:02 am

Cinque Terre

27.39 K

Cinque Terre

0