ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 03-10-2020

ದಿನಾಂಕ 03-10-2020, ಶನಿವಾರ, ಶಾಲಿವಾಹನಶಕೆ 1942, ಶ್ರೀಶಾರ್ವರಿನಾಮ ಸಂವತ್ಸರ ದಕ್ಷಿಣಾಯನ ಶರದ್ ಋತು ಅಧಿಕ ಅಶ್ವಿನಮಾಸ ಕೃಷ್ಣಪಕ್ಷ ದ್ವಿತಿಯಾ ಪೂರ್ಣ, ರೇವತಿ 08.50, ವ್ಯಾಘಾತ 22.02, ತೈತಿಲ 18.12.

ಬೆಂಗಳೂರು 06.10, 18.02, ಹುಬ್ಬಳ್ಳಿ ಸೂರ್ಯೋದಯ 06.20 sಸೂರ್ಯಾಸ್ತ 18.11, ವಿಜಯಪುರ ಸೂರ್ಯೋದಯ 06.19 ಸೂರ್ಯಾಸ್ತ 18.09,

ಸೌರ ಕನ್ಯಾಮಾಸ 18, ಸಫರ್ 15, ರಾಹುಕಾಲ 09.00-10.30, ಗುಳಿಕ 06.00-07.30, ಯಮಗಂಡ 01.30-03.00. ಶುಭದಿನ.

ಮೇಷ : ಶೃದ್ಧೆಯಿಂದ ಕೆಲಸ ಮಾಡುವದರಿಂದ ಕಾರ್ಯ ಯಶ ದೊರೆಯುವದು. ಅಪರಿಚಿತರೊಂದಗೆ ವ್ಯವಹಾರ ಸೂಕ್ಷ್ಮತೆ

ಇರಲಿದೆ. ಸಮಾಧಾನಕರ ಲಾಭ. ವಿದ್ಯೆಯಲ್ಲಿ ಕೀರ್ತಿ.

ವೃಷಭ : ಹೊಗಳು ಭಟ್ಟರಿಂದ ತೊಂದರೆ ಎದುರಿಸುವ ಸಂಭವವಿದೆ. ವಿನಾಕಾರಣ ಕಲಹಕ್ಕೆ ಆಸ್ಪದ ನೀಡದಂತೆ

ನಡೆದುಕೊಳ್ಳುವಿರಿ. ಗೌರವ ಪ್ರಾಪ್ತಿ.

ಮಿಥುನ : ಆತ್ಮ ಸಂಶಯದಿಂದ ಹೆದರಿಕೆ ಇರುವದು. ಕಳೆದ ವಸ್ತುವಿಗಿಂತ ಇರುವ ವಸ್ತುವಿನ ಬಗ್ಗೆ ಗಮನ ಹರಿಸುವಿರಿ. ಆಸ್ತಿ

ವ್ಯವಹಾರಗಳಿಂದ ಲಾಭ ದೊರೆಯುವದು.

ಕರ್ಕ : ವಿದ್ಯಾಭ್ಯಾಸದ ಚಿಂತೆ ಇರುವದು. ಮಕ್ಕಳಿಂದ ಗೌರವ ಪ್ರಾಪ್ತಿಯಾಗುವ ಯೋಗವಿದೆ. ಅಧಿಕ ಖರ್ಚು,

ಬಂಧುವರ್ಗದಿಂದ ಸಹಾಯ ನಿರೀಕ್ಷೆ.

ಸಿಂಹ : ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಸಂಭವ. ವಾಸ್ತವಿಕತೆಯನ್ನು ಒಪ್ಪುವದು ಅನಿವಾರ್ಯವಾಗುವ ಯೋಗವಿದೆ.

ಸುಧಾರಣೆಗೆ ಒಳ್ಳೆಯ ಅವಕಾಶ.

ಕನ್ಯಾ : ಕಷ್ಟದಲ್ಲಿಯೂ ದುರ್ಲಭ ಸಾಧನೆ ಮಾಡುವಿರಿ. ನಾನಾ ಮೂಲಗಳಿಂದ ಸಹಾಯ ಹರಿದು ಬರುವದು. ಅಧಿಕಾರಿಗಳ

ಭೇಟಿಯ ಯೋಗವಿದೆ.

ತುಲಾ : ನಾಯಕತ್ವದ ಗುಣದಿಂದ ಕಾರ್ಯ ಸಾಧನೆ. ಧನಹಾನಿಯ ಸಂಭವವಿದೆ. ಅಪಾತ್ರ ವಿಶ್ವಾಸದಿಂದ ತೊಂದರೆ ಸಾಧ್ಯತೆ

ಇರುವದು. ಮಿತ್ರರಿಂದ ಸಹಾಯ.

ವೃಶ್ಚಿಕ : ಅರ್ಧಕ್ಕೆ ನಿಂತ ಕೆಲಸಗಳಲ್ಲಿ ಚೇತರಿಕೆ ಕಂಡುಬರುವದು. ಆಗದವರ ಕುತಂತ್ರ ವಿಫಲವಾಗುವದು. ಚಿಂತಿತ

ವ್ಯವಹಾರಗಳು ಪೂರ್ಣಗೊಳ್ಳುವವು. ಕಾನೂನಿನ ಕೆಲಸಗಳು ಸುಗಮವಾಗುವವು.

ಧನು : ಬಾಂಧವರಲ್ಲಿ ವಿಚಾರಿಸಿ ಮುಂದುವರೆಯುವ ಆಲೋಚನೆ. ಶುಭ ಸಮಾಚಾರ. ಮಂಗಲಕಾರ್ಯಕ್ಕೆ ತಯಾರಿ

ಮಾಡುವಿರಿ. ಧನಾರ್ಜನೆಯ ಮಾರ್ಗ ಸುಗಮ.

ಮಕರ : ವ್ಯವಹಾರದಲ್ಲಿ ಚಾಕಚಕ್ಕೆತೆ ಇರುವದರಿಂದ ಕಾರ್ಯಯಶ. ಪದೋನ್ನತಿ. ಅಧಿಕಾರಿಗಳಿಂದ ಕಿರಿಕಿರಿ ಸಂಭವ.

ಅನಾವಶ್ಯಕ ತಿರುಗಾಟದಿಂದ ಆಯಾಸವಿರುವದು.

ಕುಂಭ : ಕೌಟುಂಬಿಕ ಗೊಂದಲಗಳು ಬಗೆಹರಿಯುವವು. ಮಕ್ಕಳಿಂದ ಸಂತೋಷ ಉಂಟಾಗುವದು. ಸರಿಯಾದ

ನಿರ್ಧಾರಗಳಿಂದ ಕಾರ್ಯ ಪ್ರಗತಿಯಾಗುವದು.

ಮೀನ : ಪರಿವಾರದವರಿಗೆ ಶಕ್ತಿ ಮೀರಿ ಸಹಾಯ ಮಾಡುವಿರಿ. ಚಿಂತೆ ಕಡಿದು ನಿರಾಳ ಭಾವನೆ ಮೂಡುವದು. ಅಪೇಕ್ಷಿತ

ಸ್ಥಾನ ದೊರೆಯುವದು. ಆದಾಯ ಹೆಚ್ಚುವದು.

Edited By :
PublicNext

PublicNext

03/10/2020 07:33 am

Cinque Terre

24.4 K

Cinque Terre

0