ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 21.12.2020

ಮೇಷ: ಸುಲಭವಾಗಿ ಬಗೆಹರಿಯುವ ವಿಷಯಕ್ಕೆ ಸುಮ್ಮನೆ ಕಾದಾಡಬೇಡಿ. ರಾಜಿ ಮಾತುಕತೆ ನಡೆಸಿದರೆ ಒಳಿತಾಗಲಿದೆ.

ವೃಷಭ: ಕಿರಿಕಿರಿ ಮಾಡುವವರು ಇರುತ್ತಾರೆ. ಅವರನ್ನು ನಿಯಂತ್ರಿಸಿ. ಹಿಂದಿನ ಅನುಭವಗಳ ಕಾರಣ ಎಚ್ಚರದ ಹೆಜ್ಜೆಗಳನ್ನು ಇಡಿ.

ಮಿಥುನ: ಎಷ್ಟೇ ಕೂಗಾಡಿದರೂ ಕೋಪದಿಂದ ಏನೇನೂ ಲಾಭವಿಲ್ಲ. ಮನೆಯ ಸದಸ್ಯರನ್ನು ನಿಭಾಯಿಸಿದರೆ ಸಂತಸವಿದೆ.

ಕಟಕ: ಭಕ್ತಿಯಿಂದ ಕುಲದೇವರನ್ನು ಸ್ತುತಿಸಿ. ಅಂದುಕೊಂಡ ಕಾರ್ಯದಲ್ಲಿ ಸುಲಭದ ಯಶಸ್ಸು ಸಾಕಾರಗೊಳ್ಳಲಿದೆ.

ಸಿಂಹ: ಕೆಲವು ಸಮಸ್ಯೆಗಳು ಎದುರಾಗಲಿವೆ. ಆದರೂ ಎದುರಿಸುವ ಧೈರ್ಯವನ್ನು ತೋರಿಸುತ್ತೀರಿ. ಹೆಚ್ಚಿನದಾದ ತಾಳ್ಮೆ ಇರಲಿ.

ಕನ್ಯಾ: ದೂರದ ಊರಿನ ನೆಂಟರು ಅಥವಾ ತೀರ ಹತ್ತಿರದ ಕುಟುಂಬ ವರ್ಗದವರೇ ಗಲಾಟೆ ಮಾಡಬಹುದು. ಜಾಗ್ರತೆ ಇರಲಿ.

ತುಲಾ: ಆತ್ಮೀಯ ಹಿತೈಷಿಗಳ ಆಗಮನದಿಂದ ನಿಮ್ಮ ವಿವಾದವೊಂದು ಅನಿರೀಕ್ಷಿತವಾಗಿ ಕೊನೆಗೊಳ್ಳುವ ಸಾಧ್ಯತೆಯಿದೆ.

ವೃಶ್ಚಿಕ: ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬುದು ನಿಮಗೂ ಗೊತ್ತು. ಆದರೂ ಭ್ರಮೆಯಲ್ಲಿ ಚಡಪಡಿಸುವ ಅಜ್ಞಾನ ಪ್ರದರ್ಶನ ಬೇಡ.

ಧನುಸ್ಸು: ಜನರಿಗೆ ಅಪಾರ್ಥವಾಗುವ ರೀತಿಯಲ್ಲಿ ವರ್ತಿಸಬೇಡಿ. ಇದರಿಂದ ನಿಮಗಿರುವ ವರ್ಚಸ್ಸಿಗೆ ಬಾಧಕವಾದೀತು.

ಮಕರ: ಬಹು ಮುಖ್ಯವಾದ ಕಡತವೊಂದು ಕಣ್ತಪ್ಪಿ ಕಾಣೆಯಾಗಬಹುದು. ಈ ಬಗ್ಗೆ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯ.

ಕುಂಭ: ತಾಳ್ಮೆಯಿಂದ ಹಿರಿಯರ ಮಾತುಗಳನ್ನು ಕೇಳಿಸಿಕೊಳ್ಳಿ. ಇಂಥ ವ್ಯವಧಾನದಿಂದ ಮುಂದೆ ಗೆಲುವು ಸಾಧಿಸುವಿರಿ.

ಮೀನ: ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಜಾಣ್ಮೆಯ ಗಾದೆಮಾತನ್ನು ಅರಿತು ಮುನ್ನಡೆಯಿರಿ. ಇದರಿಂದ ನಿಮಗೆ ಕ್ಷೇಮವಿದೆ.

Edited By : Nirmala Aralikatti
PublicNext

PublicNext

21/12/2020 07:12 am

Cinque Terre

40.82 K

Cinque Terre

0