ಮೇಷ: ಮಾತುಕತೆಯ ಸಂದರ್ಭದಲ್ಲಿ ಜಾಗ್ರತೆಯಿಂದ ವರ್ತಿಸಿ. ನಿಮ್ಮ ಹಿತವಚನಗಳಿಗೆ ಹೆಚ್ಚಿನದಾದ ಗೌರವವೇ ದೊರೆಯಲಿದೆ.
ವೃಷಭ: ಯಾರಿಗೆ ಯಾರೂ ಅನಿವಾರ್ಯವೇನಲ್ಲ ಎಂಬುದು ತಿಳಿಯಲಿದೆ. ನಿಮ್ಮ ಸಾಮರ್ಥ್ಯದ ಮೇಲಿನ ನಂಬಿಕೆ ಬಿಡದಿರಿ.
ಮಿಥುನ: ವಿಭಿನ್ನ ರೀತಿಯದಾದ ತೊಡಕುಗಳನ್ನು ಎದುರಿಸುತ್ತೀರಿ. ಆದರೆ ಸಮೃದ್ಧ ಅನುಭವವೇ ನಿಮ್ಮನ್ನು ರಕ್ಷಣೆ ಮಾಡಲಿದೆ.
ಕಟಕ: ನಿಮ್ಮ ಉನ್ನತ ಚಿಂತನೆಯೊಂದು ವಿಶೇಷವಾದ ಪ್ರಶಂಸೆಯನ್ನು ಗಳಿಸಿಕೊಡಲಿದೆ. ಆದರೆ ವ್ಯರ್ಥ ಅಹಂಕಾರವನ್ನು ಬಿಟ್ಟುಬಿಡಿ.
ಸಿಂಹ: ಯೋಗ್ಯತೆ ಇಲ್ಲದಂತಹ ಜನ ಹಿಂಬಾಲಿಸುತ್ತಾರೆ. ಮಾತಾಡದೆ ಮೌನವಾಗಿ ಇರುವುದರಿಂದಲೇ ಎಲ್ಲವೂ ಬೇಗ ಬಗೆಹರಿಯಲಿವೆ.
ಕನ್ಯಾ: ನಿಮ್ಮ ಸಂಕಷ್ಟದ ವೇಳೆ ಮಕ್ಕಳು ಆರೈಕೆಗೆ ಮುಂದಾಗಲಿದ್ದಾರೆ. ಈ ವಿಚಾರ ಹೆಚ್ಚಿನ ಶಕ್ತಿಯನ್ನು ತಂದುಕೊಡಲಿದೆ.
ತುಲಾ: ಹಳೆಯ ಮನೆಯ ನವೀಕರಣದ ವಿಚಾರದಲ್ಲಿ ಸಹೋದರರ ಬೆಂಬಲ ಲಭಿಸುತ್ತದೆ. ಆದರೆ ಸಾಲದ ಶೂಲಕ್ಕೆ ಸಿಲುಕದಿರಿ.
ವೃಶ್ಚಿಕ: ಕಚೇರಿಯಲ್ಲಿ ವೃಥಾ ಜಗಳಕ್ಕೆ ಬರುವವರ ಬಗೆಗೆ ಜಾಗರೂಕರಾಗಿರಿ. ಇಲ್ಲವಾದರೆ ಅವಮಾನ ಉಂಟಾದೀತು.
ಧನುಸ್ಸು: ನಿಮ್ಮಷ್ಟು ಯೋಗ್ಯತೆ ಇಲ್ಲದವರು ನಿಮಗೆ ಉಪದೇಶ ಮಾಡಲೆಂದು ಬರುತ್ತಾರೆ. ಸುಮ್ಮನೆ ನಕ್ಕು ಹಗುರಾಗಿಬಿಡಿ.
ಮಕರ: ನೀವು ಗಳಿಸಿಟ್ಟ ಹಣವನ್ನು ಜಾಣ್ಮೆಯಿಂದ ಕಿತ್ತುಕೊಳ್ಳುವ ಜನರ ಬಗ್ಗೆ ಹುಷಾರಾಗಿರಿ. ಸಹನೆಯನ್ನೂ ಬಿಡಿದಿರಿ.
ಕುಂಭ: ಮನೆಯ ಪ್ರತಿಯೊಬ್ಬರ ಬಳಿಯೂ ಮುಕ್ತವಾಗಿ ಮಾತನಾಡಿ. ನಿಮ್ಮ ಬೇಕಾಗಿರುವ ಬೆಂಬಲವು ಸಹಜವಾಗಿಯೇ ಒದಗಿಬರಲಿದೆ.
ಮೀನ: ಆರ್ಥಿಕ ವಿಚಾರದ ಬಗೆಗೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ಒಳಿತಿಗೆ ಸಂಬಂಧಿಸಿದ ಮುಖ್ಯ ತಿರುವು ಲಭ್ಯವಾಗಲಿದೆ.
PublicNext
19/12/2020 07:13 am