ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ-ರಾಷ್ಟ್ರದ ರಾಜಕೀಯದಲ್ಲಿ ವಿಪ್ಲವ:ಕೋಡಿಮಠ ಶ್ರೀಗಳ ಭವಿಷ್ಯ

ದಾವಣಗೆರೆ: ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ವಿಪ್ಲವ ಆಗಲಿದೆ ಎಂದು ಹಾಸನ ಜಿಲ್ಲೆಯ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮತ್ತೊಮ್ಮೆ ರಾಜಕೀಯದ ಬಗ್ಗೆ ಭವಿಷ್ಯ ಹೇಳಿದಿದ್ದಾರೆ.

ರಾಜಕೀಯ ವಿಪ್ಲವಕ್ಕೆ ಬರುವ ಜನವರಿವರೆಗೂ ಸಮಯವಿದೆ. ಈಗಾಗಲೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ ರಾಜಕೀಯ ಬದಲಾವಣೆ ಆಗುತ್ತಿವೆ. ಅದೇ ರೀತಿ ನಮ್ಮಲ್ಲಿಯೂ ವಿಪ್ಲವ ಆಗಲಿದೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂಬುದರ ಬಗ್ಗೆ ಹೇಳಿದರು.

ಕೆಲ ದಿನಗಳ ಹಿಂದೆ ಗ್ರಹಣ ಫಲ ರಾಜಕೀಯ ವರ್ಗದ ಬಗ್ಗೆ ವಿಪ್ಲವ ಅಂತ ಬಂದಿದೆ. ಇದೇ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪನವರ ಕುರಿತು ಕೇಳಿದ ಪ್ರಶ್ನೆಗೆ, ಒಬ್ಬೊಬ್ಬರ ಬಗ್ಗೆ ಹೇಳಲ್ಲ ಎಂದು ಉತ್ತರಿಸಿದರು.

Edited By : Nagaraj Tulugeri
PublicNext

PublicNext

23/11/2020 01:15 pm

Cinque Terre

55.08 K

Cinque Terre

4